ಪ್ರತಿ ಹೂವು ಅದರದೆ ಆದ ಪರಿಮಳ ಹೊಂದಿರುತ್ತದೆ. ಪ್ರತಿನಿತ್ಯ ಹೂವುಗಳನ್ನ ಅಲಂಕಾರಕ್ಕೆ, ಮುಡಿಯಲು ಬಳಸ್ತಾರೆ. ಆದರೆ ಹೂವು ಕೇವಲ ಅಲಂಕಾರಕ್ಕೆ, ಪರಿಮಳಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. ಚೆಂಡು ಹೂ, ಲಿಲ್ಲಿಗಳಂತಹ ಹೂವುಗಳು ದೇಹದ ತೇವಾಂಶವನ್ನು ಉಳಿಸುತ್ತದೆ.
ಚೆಂಡು ಹೂವುಗಳನ್ನು ಒಣಗಿಸಿ ಪುಡಿಮಾಡಿ. ಅದಕ್ಕೆ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ. ನಂತರ ಅದನ್ನು ಬಿಸಿ ಮಾಡಿ ತಣ್ಣಗಾದ ನಂತರ ಕಂಟೇನರ್ ನಲ್ಲಿ ಸಂಗ್ರಹಿಸಿ, ಯಾವಾಗ ಬೇಕಾದರೂ ಬಳಸಬಹುದು. ಇದು ಆ್ಯಂಟಿ ಏಜಿಂಗ್, ಉರಿಯೂತ, ಗುಳ್ಳೆಗಳು, ಕಣ್ಣುಗಳ ಊತ ಮತ್ತು ಒಡೆದ ಚರ್ಮಕ್ಕೆ ಪರಿಹಾರ ನೀಡುತ್ತದೆ.
ದಾಸವಾಳ ಒಂದು ಜೆಲ್ ತರಹದ ಪದಾರ್ಥವನ್ನು ಹೊಂದಿರುತ್ತದೆ. ಇದನ್ನ ಮಾಯಿಶ್ಚರೈಸರ್ ಆಗಿ ಬಳಸಬಹುದು. ಎಲೆಗಳನ್ನು ಚರ್ಮದ ಮೇಲೆ ಸ್ಕ್ರಬ್ ಮಾಡಬೇಕು. ಇದು ಸುಕ್ಕುಗಳು, ಕಪ್ಪು ಕಲೆಗಳು ಮತ್ತು ಒಣ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ದಾಸವಾಳದ ಎಣ್ಣೆಯನ್ನು ಹೇರ್ ಆಯಿಲ್ ಆಗಿ ಮತ್ತು ಹೊಟ್ಟಿನಿಂದ ಮುಕ್ತಿ ಹೊಂದಲು ಬಳಸಬಹುದು.
ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದಾಗಿ ಲ್ಯಾವೆಂಡರ್ ಹೂವುಗಳನ್ನು ಅನೇಕ ಸೌಂದರ್ಯ ಚಿಕಿತ್ಸೆಗಳಿಗೆ ಬಳಸ್ತಾರೆ. ಇದರ ಹೂವಿನ ಪೇಸ್ಟ್ ಕಣ್ಣು ಮತ್ತು ಕಿವಿಗಳ ಸೌಂದರ್ಯ ಕಾಪಾಡುತ್ತದೆ. ಇದರ ತೈಲ ಬಳಸಿ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಿ.
ಮಲ್ಲಿಗೆ ಹೂವುಗಳನ್ನು ರುಬ್ಬಿ, ಜೇನುತುಪ್ಪ ಮತ್ತು ಹಾಲು ಸೇರಿಸಿ. ನಂತರ ಅದನ್ನು ಮುಖದ ಮೇಲೆ ಹಚ್ಚಿ. ಇದ್ರಿಂದ ಚರ್ಮದ ಸುಕ್ಕು, ಮೊಡವೆ ಮತ್ತು ಮುಖದ ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುಕ್ತವಾಗಿ ಕಾಣುತ್ತದೆ.
ಮುಖದ ಸೌಂದರ್ಯ ಕಾಪಾಡಿಕೊಳ್ಳಲು ವಿಟಾಮಿನ್ ಸಿ ಮತ್ತು ಬಿ ಅಗತ್ಯ. ಕಮಲದ ಹೂವುಗಳಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್ ಗಳು ಚರ್ಮದ ಹೊಳಪು ಹೆಚ್ಚಿಸುತ್ತದೆ. ಎಣ್ಣೆಯನ್ನು ತಲೆಗೆ ಹಚ್ಚುವುದ್ರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ.