
ವಿಮಾನದಲ್ಲಿ ಪ್ರಯಾಣಿಸುವಾಗ, ಹೆಚ್ಚಿನ ಸಮಯ, ಜನರು ಕ್ಯಾಬಿನ್ ಸಿಬ್ಬಂದಿ ಹೇಳುವ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಫ್ಲೈಟ್ ಅಟೆಂಡೆಂಟ್‌ಗಳು ತಮ್ಮ ಕೆಲಸವನ್ನು ಮೋಜಿನ ರೀತಿಯಲ್ಲಿ ನಿರ್ವಹಿಸುತ್ತಾ ಪ್ರಯಾಣಿಕರು ಖುಷಿಯಾಗಿ ಇಡುತ್ತಾರೆ.
ಅಂಥದ್ದೇ ವಿಡಿಯೋ ಈಗ ವೈರಲ್ ಆಗಿದೆ. NowThis ಮೂಲಕ ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊವು ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್ ಅಟೆಂಡೆಂಟ್ ಅನ್ನು ತೋರಿಸುತ್ತದೆ.
ಈ ವಿಡಿಯೋದಲ್ಲಿ, ಅಟೆಂಡೆಂಟ್ ಸುರಕ್ಷತಾ ಕಾರ್ಯವಿಧಾನವನ್ನು ಉಲ್ಲಾಸದ ರೀತಿಯಲ್ಲಿ ಪ್ರದರ್ಶಿಸುವುದನ್ನು ಕಾಣಬಹುದು. ಇದರಲ್ಲಿ ಅವರು ತಮ್ಮ ಕೆಲಸದಿಂದ ಪ್ರಯಾಣಿಕರು ಬಿದ್ದೂ ಬಿದ್ದೂ ನಗುವಂತೆ ಮಾಡುತ್ತಿದ್ದಾರೆ. ಇದರ ವಿಡಿಯೋ ನೋಡಿ ಕೆಲಸವನ್ನು ಹೇಗೆಲ್ಲಾ ನಿರ್ವಹಿಸಬಹುದು ಎನ್ನುವುದು ಈ ಅಟೆಂಡೆಂಟ್ ಸಾಕ್ಷಿ ಎಂದು ಹಲವು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೀಡಿಯೊ ಸುಮಾರು 8 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.