ಫ್ಯಾಟಿ ಲಿವರ್ ಸಮಸ್ಯೆ ಬಗ್ಗೆ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.
ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಯಕೃತ್ತಿನ ಕೊಬ್ಬು ಮತ್ತು ಮೆದುಳಿನ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ತಜ್ಞರು ಕಳಪೆ ಆಹಾರ ಮತ್ತು ಆಲ್ಕೋಹಾಲ್‌ಯುಕ್ತವಲ್ಲದ ಫ್ಯಾಟಿ ಲಿವರ್ ಕಾಯಿಲೆಯ ನಡುವಿನ ಸಂಬಂಧವನ್ನು ಲಿಂಕ್ ಮಾಡಿದ್ದಾರೆ. ಅನಾರೋಗ್ಯಕರ ಅಥವಾ ಕಳಪೆ ಆಹಾರವನ್ನು ಸೇವಿಸುವವರಲ್ಲಿ ಈ ಕಾಯಿಲೆಯ ಅಪಾಯ ಹೆಚ್ಚು. ಈ ಕಾಯಿಲೆ ಆವರಿಸಿಕೊಂಡರೆ ಮೆದುಳಿನ ಜ್ಞಾಪಕ ಶಕ್ತಿ ನಷ್ಟ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಫ್ಯಾಟಿ ಲಿವರ್ ಕಾಯಿಲೆ ಮುಖ್ಯವಾಗಿ ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಕ್ಕರೆ ಬೆರೆತ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರದ ಸೇವನೆಯನ್ನು ಹೆಚ್ಚಿಸಿದಾಗ, ಅದು ಕ್ರಮೇಣ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಅನಿಯಂತ್ರಿತ ಬೊಜ್ಜು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಫ್ಯಾಟಿ ಲಿವರ್ ಕಾಯಿಲೆಯ ಲಕ್ಷಣಗಳು
ವಿಪರೀತ ಹೊಟ್ಟೆ ನೋವು
ವಾಕರಿಕೆ
ಹಸಿವಾಗದೇ ಇರುವುದು
ಹಠಾತ್ ತೂಕ ನಷ್ಟ
ಹೊಟ್ಟೆ ಮತ್ತು ಕಾಲುಗಳಲ್ಲಿ ಊತ
ವಿಪರೀತ ಆಯಾಸ
ದೌರ್ಬಲ್ಯ
ಚರ್ಮದ ಬಣ್ಣದಲ್ಲಿ ಬದಲಾವಣೆ
ಇವೆಲ್ಲವೂ ಫ್ಯಾಟಿ ಲಿವರ್ ಕಾಯಿಲೆಯ ಪ್ರಮುಖ ಲಕ್ಷಣಗಳು. ಯಾವುದೇ ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ಸುರಕ್ಷಿತವಾಗಿರಿಸಲು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಸುರಕ್ಷಿತ ಆಹಾರ ಕ್ರಮವನ್ನು ತಪ್ಪದೇ ಪಾಲಿಸಿ.