ಕರ್ನಾಟಕದ ಹುಬ್ಬಳ್ಳಿಯ ಒಂದು ಕುಟುಂಬ ಕಳೆದ 30 ವರ್ಷಗಳಿಂದ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಆಟಿಕೆ ಪ್ರದರ್ಶನವನ್ನು ಆಯೋಜಿಸುತ್ತಿದೆ.
ದಸರಾ ಹಬ್ಬವನ್ನು ಭಾರತದಾದ್ಯಂತ ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ‘ಬೊಂಬೆ ಹಬ್ಬ’ ಅಥವಾ ತೆಲುಗಿನಲ್ಲಿ ‘ಬೊಮ್ಮಲ ಕೊಲುವು’ ಎಂಬ ವರ್ಣರಂಜಿತ ಆಟಿಕೆಗಳನ್ನು ಪ್ರದರ್ಶಿಸುವ ಮೂಲಕ ಆಚರಿಸುತ್ತಾರೆ.
ನಿಮ್ಮ ʼಲಿವರ್ʼ ಬಗ್ಗೆ ಇರಲಿ ಜಾಗೃತಿ; ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಕಾಣಿ
“ಈ ಅವತಾರಗಳಿಗೆ ಸಂಬಂಧಿಸಿದ ಕಥೆಗಳನ್ನು ಮಕ್ಕಳಿಗೆ ವಿವರಿಸಲು ನಾವು ದಶಾವತಾರ, ರಾಮಾವತಾರ, ಅಷ್ಟಲಕ್ಷ್ಮಿ ಮತ್ತು ಇತರರ ಗೊಂಬೆಗಳನ್ನು ಪ್ರದರ್ಶಿಸುತ್ತೇವೆ” ಎಂದು ಕುಟುಂಬ ಸದಸ್ಯರಾದ ಭಾರತಿ ನಂದಕುಮಾರ್ ಹೇಳಿದ್ದಾರೆ.
“ದಸರಾ ಹಬ್ಬವನ್ನು ಆಚರಿಸುವ ಪರಿಕಲ್ಪನೆಯು ಅತ್ಯಂತ ವಿಶಿಷ್ಟ ಮತ್ತು ಆಸಕ್ತಿದಾಯಕವಾಗಿದೆ” ಎಂದು ಮತ್ತೊಬ್ಬರು ಕುಟುಂಬ ಸದಸ್ಯರಾದ ಶರ್ನಾಯ ಹೇಳಿದ್ದಾರೆ. “ಈ ರೀತಿಯ ದಸರಾ ಆಚರಣೆ ನನಗೆ ತುಂಬಾ ಹೊಸದು. ಏಕೆಂದರೆ ಇದನ್ನು ನನ್ನ ತಾಯಿಯ ಮನೆಯಲ್ಲಿ ಮಾಡುವುದಿಲ್ಲ. ನಾನು ಈ ಪರಿಕಲ್ಪನೆಯನ್ನು ನೋಡಿದಾಗ ನನಗೆ ತುಂಬಾ ಇಷ್ಟವಾಯಿತು. ಈ ಪರಿಕಲ್ಪನೆಯು ಅದ್ಭುತವಾಗಿದೆ ಮತ್ತು ಪುರಾಣ ಕಥೆಗಳನ್ನು ಮಕ್ಕಳಿಗೆ ಈ ರೀತಿ ಪರಿಚಯಿಸುವುದು ನಿಜವಾಗಿಯೂ ಆಸಕ್ತಿದಾಯಕವಾಗಿದೆ” ಎಂದು ಶರ್ನಾಯ ತಿಳಿಸಿದ್ದಾರೆ.