alex Certify ಕಿಡ್ನಿ ವೈಫಲ್ಯಕ್ಕೆ ಕಾರಣ ಈ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ವೈಫಲ್ಯಕ್ಕೆ ಕಾರಣ ಈ ಅಂಶ

Image result for kidney-failure-know-these-conditions-and-factors

ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡಗಳ ವೈಫಲ್ಯ ಅತ್ಯಂತ ಅಪಾಯಕಾರಿ.

ರಕ್ತದಿಂದ ಚಯಾಪಚಯ ತ್ಯಾಜ್ಯಗಳನ್ನು ಬೇರ್ಪಡಿಸಲು ಅಥವಾ ತೆಗೆದು ಹಾಕಲು ಸಾಧ್ಯವಾಗದೇ ಇದ್ದರೆ ಕಿಡ್ನಿ ಫೇಲ್ ಆಗಿದೆ ಎಂದರ್ಥ. ಕಿಡ್ನಿ ಕೆಲಸ ಮಾಡಿಸುವುದನ್ನು ನಿಲ್ಲಿಸಿದಾಗ ವೈಫಲ್ಯ ಉಂಟಾಗುತ್ತದೆ, ಕೆಲವೇ ಗಂಟೆಗಳಲ್ಲಿ ಕಿಡ್ನಿ ಫೇಲ್ ಆಗುವ ಸಾಧ್ಯತೆಗಳಿರುತ್ತವೆ.

ಮೂತ್ರಪಿಂಡ ವೈಫಲ್ಯದಿಂದ ಅಪಾಯಕಾರಿ ತ್ಯಾಜ್ಯಗಳೆಲ್ಲ ನಿಮ್ಮ ದೇಹದಲ್ಲಿ ಶೇಖರಣೆಯಾಗುತ್ತವೆ. ಆಗ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಅತ್ಯಂತ ಅವಶ್ಯಕ. ಮೂತ್ರಪಿಂಡ ವೈಫಲ್ಯ ಅಥವಾ ಸಮಸ್ಯೆಗೆ ಚಿಕಿತ್ಸೆ ಇದೆ, ಆದ್ರೆ ದೀರ್ಘಕಾಲದ ಸಮಸ್ಯೆ ಆಗಿದ್ದಲ್ಲಿ ಗುಣಮುಖರಾಗುವುದು ಕಷ್ಟಕರ. ಈ ತೊಂದರೆ ಯಾವ ವಯಸ್ಸಿನಲ್ಲಾದ್ರೂ ಕಾಣಿಸಿಕೊಳ್ಳಬಹುದು. ಕಿಡ್ನಿ ವೈಫಲ್ಯಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು ಯಾವುದು ಅನ್ನೋದನ್ನು ನೋಡೋಣ.

-ಅಧಿಕ ರಕ್ತದೊತ್ತಡ

-ರಕ್ತದಲ್ಲಿ ಅಧಿಕ ಕೊಬ್ಬಿನಾಂಶ

-ಡಯಾಬಿಟೀಸ್ (ಸಕ್ಕರೆ ಖಾಯಿಲೆ)

-ಗ್ಲಾಮೆರುಲೋನೆಫ್ರಿಟಿಸ್ (ಮೂತ್ರಪಿಂಡದ ಫಿಲ್ಟರಿಂಗ್ ಘಟಕಗಳಲ್ಲಿ ಉರಿಯೂತ)

-ಕುಟುಂಬದಲ್ಲಿ ಯಾರಿಗಾದರೂ ಮೂತ್ರಪಿಂಡ ವಿಫಲವಾಗಿದ್ದಲ್ಲಿ

-ಪಾಲಿಸಿಸ್ಟಿಕ್ ಕಿಡ್ನಿ ಖಾಯಿಲೆ (ಕಿಡ್ನಿಗಳಲ್ಲಿ ಸಿಸ್ಟ್ ಬೆಳೆಯುವುದು)

-ಕಿಡ್ನಿ ಕಲ್ಲು, ಕ್ಯಾನ್ಸರ್, ವಿಸ್ತ್ರತ ಫ್ರೊಸ್ಟೇಟ್ ನಿಂದ ಮೂತ್ರ ವಿಸರ್ಜನೆಗೆ ಅಡಚಣೆ

-ಲಿಥಿಯಂ ಮತ್ತು ಸ್ಟಿರಾಯ್ಡ್ ಇರುವ ಔಷಧಗಳ ದೀರ್ಘಕಾಲದ ಬಳಕೆ

-ಧೂಮಪಾನ

-ಒಬೆಸಿಟಿ ( ಬೊಜ್ಜು )

-ವೃದ್ಧಾಪ್ಯ (60 ವರ್ಷಕ್ಕಿಂತ ಅಧಿಕ)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...