ನಮಗೆ ವಯಸ್ಸಾದಂತೆ ನಮ್ಮ ತ್ವಚೆಗೂ ವಯಸ್ಸಾಗುತ್ತದೆ. ಈ ಸಮಯದಲ್ಲಿ ತ್ವಚೆ ತನ್ನ ಬಿಗಿ ಕಳೆದುಕೊಳ್ಳುವುದು ಸಹಜ. ಹುಬ್ಬಿನ ಕೆಳಭಾಗ ಇಳಿ ಬೀಳುವುದು, ಕೆನ್ನೆಯ ಚರ್ಮ ಸಡಿಲವಾಗುವುದು ಸಹಜ ಪ್ರಕ್ರಿಯೆ. ಇಂತಹ ಸಂದರ್ಭದಲ್ಲಿ ಬಹುತೇಕರು ಫೇಸ್ ಲಿಫ್ಟಿಂಗ್ ಸರ್ಜರಿ ಮೊರೆ ಹೋಗುತ್ತಾರೆ.
ಆದರೆ ಯಾವುದೇ ಶಸ್ತ್ರ ಚಿಕಿತ್ಸೆಗಳಿಲ್ಲದೇ ಸರಳವಾದ ಫೇಸ್ ಪ್ಯಾಕ್ ಬಳಸಿ ಮನೆಯಲ್ಲಿಯೇ ಇಳಿಬಿದ್ದ ತ್ವಚೆಯನ್ನು ಮೇಲತ್ತಬಹುದು. ಅಂತಹ ಕೆಲವು ಫೇಸ್ ಪ್ಯಾಕ್ ಇಲ್ಲಿವೆ ನೋಡಿ.
⦁ ಮೊಟ್ಟೆ ಮತ್ತು ಯೊಗರ್ಟ್ ಪ್ಯಾಕ್ : ಮೊಟ್ಟೆಯಲ್ಲಿರುವ ಅಲ್ಬುಮಿನ್ ಅಂಶ ತ್ವಚೆಯ ಬಿಗಿಯನ್ನು ಕಾಪಾಡುತ್ತದೆ. ಇನ್ನು ಯೊಗರ್ಟ್ ತ್ವಚೆಗೆ ಮೃದುತ್ವವನ್ನು ತಂದು ಕೊಡುತ್ತದೆ. ಒಂದು ಮೊಟ್ಟೆಯ ಬಿಳಿ ಭಾಗ ಮತ್ತು 1 ಚಮಚ ಯೊಗರ್ಟ್ ಅನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಹಚ್ಚಿ 8-10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಒಮ್ಮೆ ಈ ಪ್ಯಾಕ್ ಹಾಕುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
⦁ ಸ್ಟ್ರಾಬೆರಿ ಮತ್ತು ನಿಂಬೆರಸದ ಫೇಸ್ಪ್ಯಾಕ್ : ಸ್ಟ್ರಾಬೆರಿ ಮತ್ತು ನಿಂಬೆ ರಸ ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿದೆ. 3 ಟೇಬಲ್ ಸ್ಪೂನ್ ಸ್ಟ್ರಾಬೆರಿ ಪ್ಯೂರಿ, ಅರ್ಧ ಟೀ ಚಮಚ ನಿಂಬೆರಸ ಮತ್ತು 3 ಟೀ ಚಮಚ ಕಾರ್ನ್ ಸ್ಟಾರ್ಚ್ ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.