ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರವಾದಾಗ ಡಬಲ್ ಚಿನ್ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವರ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸರಳವಾದ ವ್ಯಾಯಾಮಗಳನ್ನು ಅನುಸರಿಸಿ ಮುಖದ ಅಂದ ಹೆಚ್ಚಿಸಿ.
*ಮುಖದ ಕೊಬ್ಬನ್ನು ಕರಗಿಸಲು ಚುಯಿಗ್ ಗಮ್ ಬಹಳ ಸಹಕಾರಿ. ಚುಯಿಗ್ ಗಮ್ ಜಗಿಯುವುದರ ಮೂಲಕ ಕೂಡ ಮುಖದ ಕೊಬ್ಬು ಕರಗಿಸಬಹುದು. ಇದರಿಂದ ಮುಖದ ಸ್ನಾಯು ಸಕ್ರಿಯವಾಗಿರುತ್ತದೆ. ದಿನಕ್ಕೆ 2 ಬಾರಿ 20 ನಿಮಿಷಗಳ ಕಾಲ ಚುಯಿಂಗ್ ಗಮ್ ಅಗೆಯಿರಿ.
*ಕೊಬ್ಬನ್ನು ಕಳೆದುಕೊಳ್ಳಲು ಸುಲಭವಾದ ವ್ಯಾಯಾಮವೆಂದರೆ ನಾಲಿಗೆ ತಿರುಗಿಸುವುದು. ನಿಮ್ಮ ಬಾಯಿಯನ್ನು ಮುಚ್ಚಿ ನಿಮ್ಮ ನಾಲಿಗೆಯಿಂದ ಹಲ್ಲಿನ ಕೆಳಗಿನ ಮತ್ತು ಮೇಲಿನ ಹಲ್ಲುಗಳ ಹೊರ ಮೇಲ್ಮೈಯನ್ನು ಸ್ಪರ್ಶಿಸುತ್ತಾ ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗಿಸುವುದು. ಇದನ್ನು 15 ನಿಮಿಷಗಳ ಕಾಲ ಮಾಡಿ.