ಈಗ ಪಿತೃಪಕ್ಷ ನಡೆಯುತ್ತಿದೆ. ಪೂರ್ವಜರ ಆರಾಧನೆಯಲ್ಲಿ ಜನರು ನಿರತರಾಗಿದ್ದಾರೆ. ಜಾತಕದಲ್ಲಿ ಪಿತೃದೋಷ ಅನೇಕರನ್ನು ಕಾಡುತ್ತದೆ. ಈ ಪಿತೃದೋಷದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.
ಪಿತೃದೋಷವಿರುವ ವ್ಯಕ್ತಿಗೆ ಮಾನಸಿಕ ಸಮಸ್ಯೆ ಕಾಡುತ್ತದೆ. ಕುಟುಂಬದಲ್ಲಿ ನೆಮ್ಮದಿಯಿರುವುದಿಲ್ಲ. ಎಷ್ಟು ಹಣ ಸಂಪಾದನೆ ಮಾಡಿದ್ರೂ ಜೀವನ ನಿರ್ವಹಣೆ ಸಾಧ್ಯವಾಗುವುದಿಲ್ಲ. ಸ್ವಂತ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಪರೀಕ್ಷೆ, ಸಂದರ್ಶನಗಳಲ್ಲಿ ವೈಫಲ್ಯ ಕಾಣಬೇಕಾಗುತ್ತದೆ. ನೌಕರರಿಗೆ ಮೇಲಧಿಕಾರಿಗಳ ಕಿರಿಕಿರಿ ಕಾಡುತ್ತದೆ. ಸಂತಾನ ಪ್ರಾಪ್ತಿಗೂ ಪಿತೃದೋಷ ಅಡ್ಡಿಯುಂಟು ಮಾಡುತ್ತದೆ.
ಜಾತಕ ನೋಡಿ ಜ್ಞಾನಿಗಳು ಪಿತೃದೋಷದ ಬಗ್ಗೆ ಮಾಹಿತಿ ನೀಡ್ತಾರೆ. ಆದ್ರೆ ಜಾತಕ ನೋಡದೆ ಇದ್ರ ಬಗ್ಗೆ ಕೆಲವೊಮ್ಮೆ ತಿಳಿದುಕೊಳ್ಳಬಹುದು. ಬೆಳಿಗ್ಗೆ ಏಳುತ್ತಿದ್ದಂತೆ ಮನೆಯಲ್ಲಿ ಗಲಾಟೆ ಶುರುವಾದ್ರೆ, ಮದುವೆ ಸಂಬಂಧ ಮುರಿದು ಬೀಳುತ್ತಿದ್ದರೆ ಇವೆಲ್ಲವೂ ಪಿತೃದೋಷದ ಸಂಕೇತ.
ಹಾಗೆ ಪದೇ ಪದೇ ಗಾಯ, ದುರ್ಘಟನೆಗಳಾಗ್ತಿರುವುದು, ಮನೆಯಲ್ಲಿ ಮಂಗಳಕರ ಕೆಲಸವಾಗದೆಯಿರುವುದು, ಮನೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು, ಮನೆಗೆ ಅಥಿತಿಗಳ ಬರುವಿಕೆ ಕಡಿಮೆಯಾಗುವುದು ಪಿತೃದೋಷದ ಸಂಕೇತ ನೀಡುತ್ತದೆ.