ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದರ ಪ್ರಕಾರ, ಬರ್ಲಿನ್ ಮೃಗಾಲಯದಲ್ಲಿರುವ ಪಾಂಗ್ ಫಾ ಹೆಸರಿನ ಈ ಆನೆ ತನ್ನ ಸೊಂಡಿಲಿನಿಂದ ಬಾಳೆಹಣ್ಣು ಸುಲಿದು ತಿನ್ನುತ್ತದೆ.
ತನಗೆ ಕೊಟ್ಟ ಬಾಳೆಹಣ್ಣನ್ನು ಎರಡು ತುಂಡುಗಳನ್ನಾಗಿ ಮಾಡಿ ಅದು ಎಷ್ಟರ ಮಟ್ಟಿಗೆ ಹಣ್ಣಾಗಿದೆ ಎಂದು ಪರಿಶೀಲಿಸುವ ಈ ಬುದ್ಧಿವಂತ ಆನೆ, ಒಂದು ವೇಳೆ ಅದು ತಿನ್ನಲು ಹದವಾಗಿಲ್ಲವೆಂದರೆ ತಿನ್ನುವುದಿಲ್ಲವಂತೆ….!
ಆನೆಗಳು ತಮ್ಮ ಸೊಂಡಿಲುಗಳನ್ನು ಹೇಗೆಲ್ಲಾ ಬಳಸಲು ಸಾಧ್ಯ ಎಂಬ ಬಗ್ಗೆ ಅಧ್ಯಯನವೊಂದನ್ನು ಮಾಡಲಾಗಿದ್ದು, ಆ ವರದಿಯಲ್ಲಿ ಪಾಂಗ್ ಫಾನ ಈ ಚತುರತೆಯನ್ನು ಉಲ್ಲೇಖಿಸಲಾಗಿದೆ.
ಆನೆ ಬಾಳೆಹಣ್ಣಿನ ಸಿಪ್ಪೆ ಸುಲಿಯುವುದನ್ನು ಈ ವಿಡಿಯೋದಲ್ಲಿ ನೀವೂ ನೋಡಿ ಎಂಜಾಯ್ ಮಾಡಿ.