ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ ಸುಳಿಯುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಆಹಾರ ಸೇವನೆ ಮಾಡಿದ ತಕ್ಷಣ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಿಲ್ಲ. ನಿರಂತರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನೀವೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಯಸಿದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಯಸಿದ್ದರೆ ಟೀ ಸೇವನೆ ನಿಲ್ಲಿಸಿ. ಟೀ ವ್ಯಸನಿಯಾಗಿದ್ದರೆ ನೀರು ಅಥವಾ ಹಾಲನ್ನು ಬಿಸಿ ಮಾಡಿ ಅದಕ್ಕೆ ಟೀ ಎಲೆಗಳನ್ನು ಹಾಕಿ ಅದನ್ನು ಫಿಲ್ಟರ್ ಮಾಡಿ ಬೇಗನೆ ಕುಡಿಯಬೇಕು. ಚಹಾವನ್ನು ಹೆಚ್ಚು ಕುದಿಸುವುದ್ರಿಂದ ರಾಸಾಯನಿಕ ಹೊರಬರುತ್ತದೆ. ಅದು ದೇಹದಲ್ಲಿನ ಕಬ್ಬಿಣ ಮತ್ತು ಸತು ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಆಹಾರದಲ್ಲಿ ನಿಂಬೆ ಹಣ್ಣು ಬಳಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆರಸ ಹಾಕಿ ಕುಡಿಯುವುದರಿಂದ ಪ್ರಯೋಜನವಾಗುತ್ತದೆ.
ಮಲಗುವ ಮೊದಲು ಬೆಚ್ಚಗಿನ ಹಾಲಿನೊಂದಿಗೆ ಅರಿಶಿನವನ್ನು ಬೆರೆಸಿ ಕುಡಿಯಿರಿ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಹಾರದಲ್ಲಿ ಸತುವಿನ ಪ್ರಮಾಣವನ್ನು ಹೆಚ್ಚಿಸಿ. ಬಿಸಿನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿ. ಆಹಾರವನ್ನು ಸೇವಿಸಿದ ನಂತರ ಬಿಸಿ ನೀರಿಗೆ ಜೀರಿಗೆ ಹಾಕಿ ಕುಡಿಯುವುದೂ ಪ್ರಯೋಜನಕಾರಿಯಾಗಿದೆ.