
ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದ ಜ್ವಾಲಾಮುಖಿಯಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಎಲ್ಲಾ ಮೊಬೈಲ್ ಗ್ರಾಹಕರಿಗೆ ‘ಟ್ರಾಯ್’ ಗುಡ್ ನ್ಯೂಸ್: ಉಚಿತ ಎಸ್ಎಂಎಸ್ ಕೊಡುಗೆ, ಡಿಜಿಟಲ್ ಪಾವತಿಗೆ ಉತ್ತೇಜನಕ್ಕೆ ಕ್ರಮ
ಈ ವರ್ಷದ ಆರಂಭದಲ್ಲಿ ಮಾರ್ಚ್ 19 ರಂದು ಇದು ಸ್ಫೋಟಗೊಂಡಿತ್ತು. ಈಗ, ಜ್ವಾಲಾಮುಖಿಯ ಮೇಲ್ಭಾಗದಿಂದ ಸೆರೆಹಿಡಿಯಲಾದ ಡ್ರೋನ್ ತುಣುಕನ್ನು ಕುಳಿಯ ಒಂದು ಭಾಗವು ಕುಸಿಯುತ್ತಿರುವುದನ್ನು ತೋರಿಸುತ್ತದೆ.
ಜ್ವಾಲಾಮುಖಿ ಕುಳಿಯ ದೊಡ್ಡ ಭಾಗವು ಕುಸಿಯುತ್ತಿರುವ ಆ ಭಾಗವು ನೋಡಲು ಚಿಕ್ಕದಾಗಿ ಕಾಣಿಸಬಹುದು. ಆದರೆ, ಇದು ವಾಸ್ತವವಾಗಿ 5 ಅಂತಸ್ತಿನ ಕಟ್ಟಡದ ಗಾತ್ರ ಹೊಂದಿದೆ ಎಂದು ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 8,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದನ್ನು ವೀಕ್ಷಿಸಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.