ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ದಡಾರ ರೋಗವು ವೇಗವಾಗಿ ಹರಡುತ್ತಿದೆ. ಈ ಕಾಯಿಲೆಯಿಂದ ಇದುವರೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. 17 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಹಳ್ಳಿಗಳ ಎಲ್ಲಾ ಶಾಲೆಗಳನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ.
ದಡಾರವನ್ನು ರುಬೆಲ್ಲಾ ಎಂದೂ ಕರೆಯುತ್ತಾರೆ. ಇದು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ. ದಡಾರ ವೈರಸ್, ಮೂಗು ಮತ್ತು ಗಂಟಲನ್ನು ಲೋಳೆಯಂತೆ ತುಂಬಿಸುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಅದರ ಲಕ್ಷಣಗಳು 7-14 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಸೌಮ್ಯವಾದ ದದ್ದುಗಳು ಏಳುತ್ತವೆ. ಈ ರೋಗವು ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ.
ದಡಾರದ ಲಕ್ಷಣಗಳು
104 ಡಿಗ್ರಿವರೆಗೆ ತೀವ್ರ ಜ್ವರ
ತೀವ್ರ ಕೆಮ್ಮು ಮತ್ತು ಮೂಗು ಸೋರುವಿಕೆ
ಕಣ್ಣುಗಳಲ್ಲಿ ನೀರು ಬರುವುದು
ತೀವ್ರ ಅತಿಸಾರ
ಕೆನ್ನೆಯ ಒಳಗೆ ಸಣ್ಣ ಕಲೆಗಳು
ದೇಹದ ಮೇಲೆ ಕಪ್ಪು ಮತ್ತು ಕೆಂಪು ದದ್ದುಗಳು
ದಡಾರವನ್ನು ತಪ್ಪಿಸುವುದು ಹೇಗೆ ?
ದಡಾರವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಸಕಾಲಿಕ ಚುಚ್ಚುಮದ್ದು. ಚುಚ್ಚುಮದ್ದಿನ ಬಳಿಕವೂ ಸೋಂಕು ಕಾಣಿಸಿಕೊಂಡರೆ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ದಡಾರದ ಲಕ್ಷಣಗಳು ತಕ್ಷಣವೇ ಕಾಣಿಸುವುದಿಲ್ಲ. ಆದ್ದರಿಂದ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಗರ್ಭಿಣಿಯರಿಗೆ ಕೂಡ ದಡಾರ ಅಪಾಯಕಾರಿಯಾಗಬಹುದು. ಹಾಗಾಗಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ರುಬೆಲ್ಲಾ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಲಸಿಕೆ. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಬೇಕು. ಇದನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮಗುವಿಗೆ ಒಂದು ವರ್ಷ ತುಂಬಿದಾಗ ಮೊದಲನೆಯದು ಮತ್ತು ಎರಡನೆಯದು ಬೂಸ್ಟರ್ ಡೋಸ್. ಮೂರು ವರ್ಷ ಮತ್ತು ನಾಲ್ಕು ತಿಂಗಳು ತುಂಬಿದಾಗ ಎರಡನೇ ಡೋಸ್ ಲಸಿಕೆಯನ್ನು ತಪ್ಪದೇ ಹಾಕಿಸಿ.