ಅಧಿಕ ತೂಕ ಹೊಂದಿರುವ ಮಕ್ಕಳಿಗೆ ಆಹಾರ ಅಲರ್ಜಿ ಕಾಡುವುದು ಹೆಚ್ಚೆಂದು ಸಂಶೋಧಕರು ಮಾಹಿತಿ ನೀಡಿದ್ದರು. ಸಂಶೋಧಕರು ಹಿಂದೆ ನಡೆದ ಸಂಶೋಧನಾ ವರದಿಗಳನ್ನೂ ಇದ್ರಲ್ಲಿ ಪರಿಗಣಿಸಿದ್ದಾರೆ.
ಜನನದ ವೇಳೆ ಮಕ್ಕಳ ತೂಕ, ಗರ್ಭಧಾರಣೆ ಸಮಯ, ಮಕ್ಕಳು ಹಾಗೂ ವಯಸ್ಕರ ಅಲರ್ಜಿ ಕಾಯಿಲೆಗಳನ್ನು ವಿಶ್ಲೇಷಿಸಿದ್ದೇವೆಂದು ಸಂಶೋಧಕರು ಹೇಳಿದ್ದಾರೆ. ಜನನ ತೂಕದಲ್ಲಿ ಪ್ರತಿ ಕಿಲೋಗ್ರಾಂ ಹೆಚ್ಚಳವು ಮಗುವಿನ ಆಹಾರ ಅಲರ್ಜಿಯ ಶೇಕಡಾ 44 ರಷ್ಟು ಅಪಾಯವನ್ನು ಹೆಚ್ಚಿಸುತ್ತದೆ. ಎಸ್ಜಿಮಾದ ಶೇಕಡಾ 17ರಷ್ಟು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಗ್ಯಾಟ್ಫೋರ್ಡ್ ಹೇಳಿದ್ದಾರೆ.
ಈ ಸಂಶೋಧನೆ ಬಹುಪಾಲು ಅಭಿವೃದ್ಧಿ ಹೊಂದಿದ ದೇಶದಲ್ಲಿ ನಡೆದಿದೆ.