ನಮಗಿಷ್ಟವಾಗುವ ಆಹಾರ ಸೇವನೆ ಮಾಡಿದ್ರೆ ಬಾಯಿ ಹಾಗೂ ಮನಸ್ಸಿಗೆ ಖುಷಿ ಸಿಗುತ್ತದೆ. ಹೀಗಂತ ಅನೇಕರು ನಂಬಿದ್ದಾರೆ.
ಆದ್ರೆ ಸಂಶೋಧಕರ ಪ್ರಕಾರ, ಉತ್ತಮ ಆಹಾರ ಸೇವನೆಯಿಂದ ಒತ್ತಡ ಕಡಿಮೆಯಾಗಲು ಸಾಧ್ಯವಂತೆ. ಇತ್ತೀಚಿನ ವರದಿ ಪ್ರಕಾರ, ಉತ್ತಮ ಆಹಾರ, ತೂಕ ಕಡಿಮೆ ಮಾಡುವ ಜೊತೆಗೆ ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆಯಂತೆ.
ಮಾನಸಿಕ ಆರೋಗ್ಯ ಹಾಗೂ ಆಹಾರ ಸೇವನೆ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ವೇಳೆ ಪೋಷಕಾಂಶಗಳಿಂದ ಕೂಡಿರುವ ಒಳ್ಳೆ ಆಹಾರ ಸೇವನೆ ಮಾಡುವುದ್ರಿಂದ ಖಿನ್ನತೆ ದೂರವಾಗುತ್ತದೆ ಎಂಬ ವಿಷ್ಯ ಗೊತ್ತಾಗಿದೆ.
ಈ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ಆರೋಗ್ಯಕರ ಡಯೆಟ್ ಖಿನ್ನತೆ ದೂರಮಾಡಿ, ಮನಸ್ಸನ್ನು ಶಾಂತವಾಗಿರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಮಾನಸಿಕವಾಗಿ ಆರೋಗ್ಯವಾಗಿರಲು ನಿಮ್ಮ ಡಯೆಟ್ ನಲ್ಲಿ ಹೆಚ್ಚು ಪೋಷಕಾಂಶವಿರುವ ಆಹಾರ ಸೇವನೆ ಮಾಡಬೇಕು. ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು. ಸಕ್ಕರೆಯಿಂದ ದೂರವಿರಬೇಕು ಎಂದು ಸಂಶೋಧಕರು ಹೇಳಿದ್ದಾರೆ.