ಆಗೊಮ್ಮೆ ಈಗೊಮ್ಮೆ ಜನರು ತಮ್ಮ ಹೆತ್ತವರ ಜೀವನವನ್ನು ಉತ್ತಮಗೊಳಿಸಲು ತಮ್ಮ ನೂರಕ್ಕೆ ನೂರು ಪ್ರತಿಶತ ಶ್ರಮ ಹಾಕುವ ನಿದರ್ಶನಗಳು ನೆಟ್ಟಿಗರಿಂದ ಹೃತ್ಪೂರ್ವಕ ಚಪ್ಪಾಳೆ ಪಡೆದಿವೆ. ಅವರ ಕಥೆಗಳು ಈ ಜಗತ್ತಿನಲ್ಲಿ ಒಳ್ಳೆಯತನವು ಇನ್ನೂ ಅಸ್ತಿತ್ವದಲ್ಲಿದೆ ಎಂದು ನಂಬುವಂತೆ ಮಾಡುತ್ತದಲ್ಲದೇ ಅನೇಕರಿಗೆ ಸ್ಪೂರ್ತಿಯನ್ನು ನೀಡುತ್ತದೆ. ಈ ಸಾಲಿಗೆ ಸೇರಬಹುದಾದ ವೀಡಿಯೊವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶರಣ್ ಅವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಕ್ಯಾಬ್ ಚಾಲಕ ತನ್ನ ಜೀವನದ ಕಥೆಯನ್ನು ಹೇಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಅವರು ವೃತ್ತಿಪರ ಚಾಲಕರಲ್ಲ ಮತ್ತು ಅವರ ಬಿಡುವಿನ ವೇಳೆಯಲ್ಲಿ ಮತ್ತು ರಜೆಯ ದಿನಗಳಲ್ಲಿ ಮಾತ್ರ ಕ್ಯಾಬ್ ಓಡಿಸುತ್ತಾರೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ.
ಆ ವ್ಯಕ್ತಿ ತಾನು ಕಂಪನಿಯಲ್ಲಿ ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ವಿವರಿಸುತ್ತಾನೆ, ಆದರೆ ತನ್ನ 65 ವರ್ಷದ ತಂದೆಗೆ ಸಹಾಯ ಮಾಡಲು ಈ ಅರೆಕಾಲಿಕ ಡ್ರೈವಿಂಗ್ ಕೆಲಸವನ್ನು ಮಾಡುತ್ತಾನೆ.
ಅವರ ತಂದೆ ಇನ್ನೂ ಕೂಡ ನಿವೃತ್ತರಾಗಿಲ್ಲ, ಏಕೆಂದರೆ ಅವರು ಮನೆಯಲ್ಲಿ ಕುಳಿತುಕೊಂಡು ಸೋಮಾರಿಯಾಗಲು ಇಷ್ಟ ಪಡುವುದಿಲ್ಲ ಎಂದು ಆ ಚಾಲಕ ಹೇಳುತ್ತಾನೆ.
ಈ ವಿಡಿಯೋ ನೋಡಿದ ನೆಟ್ಟಿಗರ ಹೃದಯ ತಟ್ಟಿದೆ. ನೂರಾರು ಮಂದಿ ಕಾಮೆಂಟ್ ಮಾಡಿದ್ದು, ಆ ವ್ಯಕ್ತಿಗೆ ಭೇಷ್ ಎಂದಿದ್ದಾರೆ. ತನ್ನ ತಂದೆಯನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವ ಈ ವ್ಯಕ್ತಿಯನ್ನು ಶ್ಲಾಘಿಸಿದರು.