ಖಿನ್ನತೆಗೆ ಒಳಗಾದಾಗ ಉತ್ಸಾಹವನ್ನು ಹೆಚ್ಚಿಸಲು ಪ್ರಾಣಿಗಳ ಒಡನಾಟವನ್ನು ಹೊಂದುವುದು ಸುಲಭವಾದ ಮಾರ್ಗವಾಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಕ್ಯೂಟ್ ನಾಯಿಯನ್ನು ನೋಡಬಹುದು. ಹಿಮದ ಮೂಲಕ ವ್ಯಕ್ತಿಯೊಬ್ಬ ಮಾರ್ಗವನ್ನು ತೆರವುಗೊಳಿಸುತ್ತಿರುವಾಗ ಈ ನಾಯಿ ತಾನೂ ಸಹಾಯಕ್ಕೆ ಬರಲೇ ಎನ್ನುವಂತೆ ಚಲಿಸುವುದನ್ನು ನೋಡಬಹುದು. ತನ್ನ ಮಾಲೀಕನಿಗೆ ಸಹಾಯ ಮಾಡಲು ಉತ್ಸುಕವಾಗಿರುವಂತೆ ನಾಯಿ ತೋರುತ್ತದೆ.
ಆದರೆ ಈ ವ್ಯಕ್ತಿ ಮೊದಲು ಸುಮ್ಮನೇ ಅದರತ್ತ ಗಮನ ಕೊಡುವುದಿಲ್ಲ. ನಾಯಿ ತನ್ನ ಮಾಲೀಕನ ಗಮನ ಸೆಳೆಯಲು ಸಾಕಷ್ಟು ಸರ್ಕಸ್ ಮಾಡುತ್ತದೆ. ಕೊನೆಗೆ ವ್ಯಕ್ತಿ ಹೋಗಿ ಅದನ್ನು ಅಪ್ಪಿಕೊಳ್ಳುವುದನ್ನು ನೋಡಬಹುದು. ಈ ಕ್ಯೂಟ್ ವಿಡಿಯೋಗೆ ಥಹರೇವಾರಿ ಕಮೆಂಟ್ಗಳು ಬಂದಿವೆ.