alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಇಲ್ಲಿ ಕೇವಲ 12 ರೂಪಾಯಿಗೆ ಮಾರಾಟವಾಗ್ತಿದೆ ಮನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಇಲ್ಲಿ ಕೇವಲ 12 ರೂಪಾಯಿಗೆ ಮಾರಾಟವಾಗ್ತಿದೆ ಮನೆ….!

ಕಡಿಮೆ ಜನಸಂಖ್ಯೆಯಿಂದ ಕಂಗೆಟ್ಟಿರುವ ಉತ್ತರ ಕ್ರೋಯೇಷಿಯಾದ ಪಟ್ಟಣವೊಂದು ಹೊಸ ನಿವಾಸಿಗಳನ್ನ ಆಕರ್ಷಿಸುವ ಸಲುವಾಗಿ ಇಲ್ಲಿರುವ ಖಾಲಿ ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಈ ಕಡಿಮೆ ದರಕ್ಕೆ ಮನೆಯನ್ನ ಕೆಲ ಬಲವಾದ ಷರತ್ತುಗಳ ಮೇಲೆ ನೀಡಲಾಗುತ್ತಿದೆ.

ಲೆಗ್ರಾಡ್​ ಎಂಬ ಪಟ್ಟಣ ಒಂದು ಕಾಲದಲ್ಲಿ ಕ್ರೋಯೆಷಿಯಾದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಪಟ್ಟಣವಾಗಿತ್ತು. ಆದರೆ ಶತಮಾನಗಳ ಹಿಂದೆ ಆಸ್ಟ್ರೋ – ಹಂಗೇರಿಯನ್​ ಸಾಮ್ರಾಜ್ಯದ ವಿಭಜನೆ ಬಳಿಕ ಇಲ್ಲಿ ಜನಸಂಖ್ಯೆ ಕುಸಿತವಾಗಿದೆ.

ಈ ಪಟ್ಟಣದಲ್ಲಿ ಪ್ರಸ್ತುತ ಜನಸಂಖ್ಯೆಯು 2250 ಆಗಿದೆ. 70 ವರ್ಷಗಳ ಹಿಂದಿನ ಜನಸಂಖ್ಯೆಗೆ ಹೋಲಿಸಿದ್ರೆ ಇದು ಅರ್ಧದಷ್ಟು ಕಡಿಮೆಯಾಗಿದೆ.

ಜನಸಂಖ್ಯೆ ತೀವ್ರಗತಿಯಲ್ಲಿ ಇಳಿಕೆ ಕಂಡ ಬಳಿಕ ಈ ಪಟ್ಟಣದಲ್ಲಿ 19 ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಇಲ್ಲಿನ ಮೇಯರ್​​ ಇವಾನ್​ ಸಬೊಲಿಕ್​ ಮಾಹಿತಿ ನೀಡಿದ್ದಾರೆ.

ಈ ರೀತಿ ಮನೆಯನ್ನ ಅತೀ ಕಡಿಮೆ ದರಕ್ಕೆ ನೀಡುವ ಮೂಲಕ ಪಟ್ಟಣದಲ್ಲಿ ಜನಸಂಖ್ಯೆಯನ್ನ ಹೆಚ್ಚಿಸೋದು ಅಧಿಕಾರಿಗಳ ಗುರಿಯಾಗಿದೆ. ಇಲ್ಲಿನ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಈಗಾಗಲೇ 17 ಮನೆಗಳು ಮಾರಾಟವಾಗಿದೆಯಂತೆ.

ಆದರೆ ಆಕರ್ಷಕ ಆಫರ್​​ಗಳ ಜೊತೆಯಲ್ಲಿ ಕೆಲ ಷರತ್ತುಗಳನ್ನ ವಿಧಿಸಲಾಗಿದೆ. ಕೆಲ ಮನೆಗಳು ಭಾಗಶಃ ಹಾನಿಗೊಳಗಾಗಿದ್ದರೆ ಕೆಲ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಹಲವು ಮನೆಗಳಲ್ಲಿ ಬಾಗಿಲುಗಳೇ ಇಲ್ಲ. ಇನ್ನು ಕೆಲ ಮನೆಗಳಲ್ಲಿ ಕಿಟಕಿಯೇ ಇಲ್ಲ. ಆದರೆ ಈ ಮನೆಗಳ ನವೀಕರಣಕ್ಕೂ ಪುರಸಭೆ ಆರ್ಥಿಕ ಸಹಾಯ ಮಾಡೋದಾಗಿ ಹೇಳಿದೆ.

ಆದರೆ ಆಸ್ತಿಯನ್ನ ಖರೀದಿಸಲು ಇಚ್ಛಿಸುವವರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಿರಬೇಕು. ಹಾಗೂ ಕನಿಷ್ಟ 15 ವರ್ಷಗಳ ಕಾಲ ಕಡ್ಡಾಯವಾಗಿ ಪಟ್ಟಣದಲ್ಲಿ ಇರಬೇಕು. ಪುರಸಭೆಯು ಈ ರೀತಿಯ ಜಾಹಿರಾತನ್ನ ನೀಡಿದ ಬಳಿಕ ರಷ್ಯಾ, ಉಕ್ರೇನ್​, ಟರ್ಕಿ, ಅರ್ಜೆಂಟೀನಾ ಹಾಗೂ ಕೊಲಂಬಿಯಾಗಳಿಂದ ಗ್ರಾಹಕರು ಆಸ್ತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೇಯರ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...