ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಆಟೋರಿಕ್ಷಾ ಚೆನ್ನೈನ ಬೀದಿಬೀದಿಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಾ ಅಡ್ಡಾಡುತ್ತಿದೆ.
ನಗರದ ಕಲಾವಿದ ಬಿ. ಗೌತಮ್ ಈ ಆಟೋರಿಕ್ಷಾಗೆ ಹೀಗೆ ಮೇಕೋವರ್ ಕೊಟ್ಟಿದ್ದು, ಲಸಿಕೆ ಪಡೆಯಲು ಸಾರ್ವಜನಿಕರಲ್ಲಿ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಯತ್ನಿಸಿದ್ದಾರೆ.
ಗೌತಮ್‌ರ ’ಆರ್ಟ್ ಕಿಂಗ್‌ಡಮ್’ ಸಂಸ್ಥೆಯು ಚೆನ್ನೈ ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಿ ಈ ಅಭಿಯಾನಕ್ಕೆ ಮುಂದಾಗಿದೆ.
BIG NEWS: ದೇಶದಲ್ಲಿ ಕೋರೋನಾ ಭಾರಿ ಇಳಿಕೆ, 37566 ಮಂದಿಗೆ ಸೋಂಕು -907 ಮಂದಿ ಸಾವು
“ಸಮುದಾಯಗಳನ್ನು ತಲುಪಲು ನಮಗೆ ಸಾರಿಗೆ ಬೇಕಾಗುತ್ತದೆ. ದೊಡ್ಡ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳಿರುವ ಕಾರಣ ಈ ಅಭಿಯಾನಕ್ಕೆ ಆಟೋರಿಕ್ಷಾ ಸೂಕ್ತವಾದ ಸಾರಿಗೆ ಎಂದು ನಿರ್ಧರಿಸಿದೆವು” ಎನ್ನುತ್ತಾರೆ ಗೌತಮ್.
ಸುದ್ದಿಪತ್ರಿಕೆಗಳು, ಪೈಪ್‌ಗಳಂಥ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದ ಗೌತಮ್ ಹಾಗೂ ಆತನ ಸಂಗಡಿಗರು, ಲಾಕ್‌ಡೌನ್ ಅವಧಿಯಲ್ಲಿ 10 ದಿನಗಳ ಒಳಗೆ ತಮ್ಮ ಈ ಕ್ರಿಯಾಶೀಲ ಕೆಲಸ ಮಾಡಿ ಮುಗಿಸಿದ್ದಾರೆ.
https://www.instagram.com/p/CQi-fwKjloV/?utm_source=ig_web_copy_link
https://www.instagram.com/tv/CQiam7Qpntl/?utm_source=ig_web_copy_link