alex Certify ಈ ಲವ್ ‌ಬರ್ಡ್ಸ್ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 25 ವರ್ಷ: ಅಜ್ಜ – ಮೊಮ್ಮಗ ಎಂದ ಕಿಡಿಗೇಡಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಲವ್ ‌ಬರ್ಡ್ಸ್ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 25 ವರ್ಷ: ಅಜ್ಜ – ಮೊಮ್ಮಗ ಎಂದ ಕಿಡಿಗೇಡಿಗಳು

ಪ್ರೀತಿ, ಪ್ರೇಮ ಅನ್ನೋದು ಯಾವ ವಯಸ್ಸಿನಲ್ಲಿ ಯಾರ ಮೇಲೆ ಹುಟ್ಟಿಕೊಳ್ಳುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಎಳೆ ವಯಸ್ಸಿನಲ್ಲಿ ಪ್ರೇಮಾಂಕುರ ಆಗಬಹುದು, ಇಲ್ಲಾ ಇಳಿ ವಯಸ್ಸಿನಲ್ಲಿ. ಅದೊಂದು ಅದ್ಭುತ ಭಾವನೆ ಅಂದರೂ ತಪ್ಪಾಗಲಿಕ್ಕಿಲ್ಲ.

ಇನ್ನೂ ಧರ್ಮ, ಜಾತಿ, ಲಿಂಗ ಇದ್ಯಾವುದೂ ಈ ಪ್ರೀತಿಗೆ ಬಿದ್ದವರಿಗೆ ಬೇಕಾಗೇ ಇಲ್ಲ. ಇತ್ತೀಚೆಗೆ ಪ್ರೀತಿಗೆ ಬಿದ್ದ ಜೋಡಿಯೊಂದು ತುಂಬಾನೇ ಸದ್ದು ಮಾಡಿತ್ತು. ಆ ಜೋಡಿ ಹೆಸರು ಕ್ರಿಸ್ಟೋಫರ್ ಅಮೆಟೋ ಮತ್ತು ಜಾನ್. ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಜಸ್ಟ್‌ 25 ವರ್ಷ

ಹೌದು, ಬರೋಬ್ಬರಿ 25 ವರ್ಷಗಳ ಅಂತರವಿರುವ ಈ ಸಮಲೈಂಗಿಕ ಜೋಡಿ ಎಲ್ಲರ ಗಮನ ಸೆಳೆದಿದೆ. ಅಸಲಿಗೆ ಕ್ರಿಸ್ಟೋಫರ್ ಅಮೆಟೋ ವಯಸ್ಸು 31. ಇನ್ನು ಜಾನ್ ವಯಸ್ಸು 56. ಡೇಟಿಂಗ್ ಆಪ್ ಮೂಲಕ ಇವರಿಬ್ಬರ ಪರಿಚಯ 2019 ರಲ್ಲಾಗಿದೆ.

ಆ ಸಮಯದಲ್ಲಿ ಕ್ರಿಸ್ಟೋಫರ್ ಅಮೆಟೋ ಕ್ಯೂಬಾದಲ್ಲಿ ರಜಾ ದಿನಗಳನ್ನ ಕಳೆಯುತ್ತಿದ್ದರು. ಇನ್ನೂ ಜಾನ್ ಅಲ್ಲೇ ಇದ್ದ ಕ್ರೂಸ್ ಒಂದರಲ್ಲಿ ಇದ್ದರು. ಇಬ್ಬರು ಬಿಡುವು ಮಾಡಿಕೊಂಡು ಭೇಟಿಯಾಗಿದ್ದಾರೆ. ಆಗ ಜೋ 25 ವರ್ಷ ದೊಡ್ಡವರಾದ ಜಾನ್ ಪ್ರೀತಿಯಲ್ಲಿ ಬಿದ್ದಿದ್ದರು.

ಅಂದಿನಿಂದ ಇಬ್ಬರು ಒಟ್ಟಿಗೆ ಸಮಯ ಕಳೆಯುವುದಕ್ಕೆ ಹೊರಗಡೆ ಸುತ್ತಾಡುವುದು. ಪದೇ ಪದೇ ಭೇಟಿಯಾಗುವುದು ಮಾಡುತ್ತಿದ್ದರು. ಆ ಸಮಯದಲ್ಲಿ ಅವರು ಅನೇಕ ಬಾರಿ ಮುಜುಗರ ಪಡುವ ಸಂದರ್ಭ ಎದುರಾಗಿದೆ. ಕಾರಣ ಈ ಜೋಡಿಯನ್ನ ನೋಡಿದಾಕ್ಷಣ ಜನರು ಕ್ರಿಸ್ಟೋಫರ್‌ಗೆ ಇವರು ನಿಮ್ಮ ಅಜ್ಜನಾ ಅಂತ ಅನೇಕರು ಪ್ರಶ್ನೆ ಮಾಡಿದ್ದಾರಂತೆ.

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಇವರು ಯಾವುದೇ ವಿಡಿಯೋ, ಫೋಟೋ ಪೋಸ್ಟ್ ಮಾಡಿದಾಗೆಲ್ಲ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಇನ್ನೂ ಜನರು ಕೊಡ್ತಿರುವ ಕಾಟ ವರದಿ ಮಾಡಿದಾಗ ಇವರಿಬ್ಬರ ಅಕೌಂಟ್ ಏನಿಲ್ಲ ಅಂದರೂ 12 ಬಾರಿ ಸಸ್ಪೆಂಡ್ ಮಾಡಿಡಲಾಗಿದೆ.

ಕ್ರಿಸ್ಟೋಫರ್ ಹೇಳುವ ಪ್ರಕಾರ ‘ಜನರು ನಮ್ಮಿಬ್ಬರಿಗೆ ಕೊಟ್ಟಿರುವ ಮಾನಸಿಕ ಯಾತನೆಗಳು ಅಷ್ಟಿಷ್ಟಲ್ಲ. ನಮಗೆ ಕರೆಯದಿರುವ ಹೆಸರುಗಳೇ ಇಲ್ಲ. ಎಷ್ಟೋ ಜನರು ನಮ್ಮ ಮೇಲಿನ ಸಿಟ್ಟಿಗೆ ನಮ್ಮನ್ನ ಕೊಂದು ಹಾಕಿ ಬಿಡುವ ಹಾಗಿದೆ. ಅಷ್ಟೆ ಅಲ್ಲ ಜನರ ಪ್ರಕಾರ ನಮಗೆ ಏಡ್ಸ್ ಇಲ್ಲಾ ಮಂಕಿಪಾಕ್ಸ್ ಆಗುತ್ತೆ ಅಂತ ಕೂಡ ಹೇಳಿದ್ದುಂಟು. ಕೆಲವು ಬಾರಿಯಂತೂ ಜನರು ಬೇಕಂತಲೇ ನನ್ನ ಬಳಿ ಬಂದು ಜಾನ್‌ನನ್ನ ನೋಡಿ ಇವರು ನಿಮ್ಮ ತಾತನಾ ಅಂತ ಕೇಳಿದ್ದಾರೆ. ಆದರೂ ನಾವು ಇದನ್ನೆಲ್ಲ ಎದುರಿಸಿ ಒಟ್ಟಿಗೆ ಇದ್ದೇವೆ ನಮ್ಮ ಗೆಳೆಯರು, ಕುಟುಂಬದವರಿಗೂ ಇದರಿಂದ ಯಾವುದೇ ಸಮಸ್ಯೆ ಇಲ್ಲ.

ಕ್ರಿಸ್ಟೋಫರ್‌ ಜಾನ್‌ಗಾಗಿ ಕೆನಡಾವನ್ನ ತೊರೆದು ಪೊಲೇಂಡ್‌ಗೆ ಶಿಫ್ಟ್‌ ಆಗಿದ್ದಾರೆ. 2021ರಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಈಗ ಇವರಿಬ್ಬರದ್ದು ಸುಖಿ ದಾಂಪತ್ಯವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...