ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ ಏಷ್ಯಾದ ದೇಶಗಳಲ್ಲಿ ಈ ’ವೈವಿಧ್ಯತೆ’ ಎಂಬುದು ಯಾವ ಮಟ್ಟಿಗೆ ಹೋಗಿರುತ್ತದೆ ಎಂದರೆ, ’ಭೂಮಿ ಮೇಲೆ ಓಡಾಡುವ ಎಲ್ಲಾ ಜೀವಿಗಳನ್ನೂ ತಿನ್ನುವ’ ಮಟ್ಟದಲ್ಲಿ!
ಇಲ್ಲಿದೆ ಟೇಸ್ಟಿ ʼಎಗ್ ಫ್ರೈʼ ಮಸಾಲ ಮಾಡುವ ವಿಧಾನ
ಜಪಾನ್‌ನಲ್ಲಿ ಜಿರಳೆಗಳಿಂದ ಮಾಡಲಾದ ಬಿಯರ್ ಒಂದು ಭಾರೀ ಸದ್ದು ಮಾಡುತ್ತಿದೆ. ಹೌದು ನೀವು ಸರಿಯಾಗೇ ಓದಿದ್ದೀರಿ, ಜಿರಳೆ ಬಿಯರ್…! ಮನುಕುಲದ ದೀರ್ಘಾಯುಷ್ಯಕ್ಕೆ ಕ್ರಿಮಿ ಕೀಟಗಳ ಸೇವನೆ ಅಗತ್ಯವೆಂದು ನಂಬಿರುವ ಜಪಾನೀಯರು ಅವುಗಳಿಂದ ಮಾಡಿದ ಖಾದ್ಯಗಳನ್ನು ಬಲು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ.
ಕೊಂಚೂ ಸೂರ್ ಎಂದು ಕರೆಯಲಾಗುವ ಈ ಪೇಯವನ್ನು ಒಳನಾಡಿನ ನೀರಿನಲ್ಲಿ ಸಿಗುವ ಮೀನುಗಳನ್ನು ತಿನ್ನುವ ಜಿರಳೆಗಳಿಂದ ಮಾಡಲಾಗುತ್ತದೆ. ಈ ಜಿರಳೆಗಳನ್ನು ಹಬೆಯಾಡುವ ನೀರಿನಲ್ಲಿ ಎರಡು ದಿನಗಳ ಮಟ್ಟಿಗೆ ಬೇಯಿಸಿ, ಆಗ ಸಿಗುವ ರಸದಲ್ಲಿ ತಯಾರಿಸಲಾಗುತ್ತದೆ. ಆಗ್ನೇಯ ಏಷ್ಯಾದಲ್ಲೂ ಸಿಗುವ ಈ ಪೇಯವನ್ನು ಐಸ್‌ನೊಂದಿಗೆ ಚಿಲ್ಡ್ ಆಗಿ ಎಂಜಾಯ್ ಮಾಡುತ್ತಾರೆ ಮಂದಿ.
ರುಚಿಕರವಾದ ಕ್ಯಾಬೇಜ್ ಚಿಲ್ಲಿ ಸವಿಯಿರಿ
ಬಿಯರ್ ಮಾತ್ರವಲ್ಲದೇ, ಈ ಜಿರಳೆಗಳನ್ನು ಹಾಗೇ ಬೇಯಿಸಿ ತಿನ್ನುವುದು ಹಾಗೂ ಸೂಪ್‌ಗಳು ಹಾಗೂ ಸ್ಟ್ಯೂಗಳ ಮೇಲೆ ಉದುರಿಸಿ ಸಹ ಸೇವಿಸಲಾಗುತ್ತದೆ. ತಾಯ್ವಾನೀಸ್ ಗಂಡು ಜಿರಳೆಯನ್ನು ಇದಕ್ಕಾಗಿ ಹೆಚ್ಚು ಬಳಸಲಾಗುತ್ತದೆ.