alex Certify ಏಷ್ಯಾದಲ್ಲೇ ಅತಿ ಹೆಚ್ಚು ಕ್ಯಾನ್ಸರ್‌ ರೋಗಿಗಳನ್ನು ಹೊಂದಿದೆ ಈ ದೇಶ, ಭಾರತಕ್ಕೆ 2ನೇ ಸ್ಥಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯಾದಲ್ಲೇ ಅತಿ ಹೆಚ್ಚು ಕ್ಯಾನ್ಸರ್‌ ರೋಗಿಗಳನ್ನು ಹೊಂದಿದೆ ಈ ದೇಶ, ಭಾರತಕ್ಕೆ 2ನೇ ಸ್ಥಾನ….!

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ. ಪ್ರಪಂಚದಾದ್ಯಂತ ಪ್ರತಿದಿನ ಸಾವಿರಾರು ಜನರ ಸಾವಿಗೆ ಕ್ಯಾನ್ಸರ್‌ ಕಾರಣವಾಗ್ತಿದೆ. ಭಾರತದಲ್ಲಿ ಕ್ಯಾನ್ಸರ್‌ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಏಷ್ಯಾದಲ್ಲಿ ಅತಿ ಹೆಚ್ಚು ಕ್ಯಾನ್ಸರ್‌ ರೋಗಿಗಳಿರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಚೀನಾ ಮೊದಲ ಸ್ಥಾನದಲ್ಲಿದೆ.

2019 ರಲ್ಲಿ ಭಾರತದಲ್ಲಿ 12 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ. ಅದೇ ವರ್ಷ 9.3 ಲಕ್ಷ ರೋಗಿಗಳು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ.

2019 ರಲ್ಲಿ ಏಷ್ಯಾದಲ್ಲಿ 94 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದವು. ಸುಮಾರು 56 ಲಕ್ಷ ಜನರ ಸಾವು ಕೂಡ ಆಗ ಸಂಭವಿಸಿದೆ. ಈ ಪೈಕಿ ಚೀನಾದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಅಂದರೆ 48 ಲಕ್ಷ ಮಂದಿ ಪತ್ತೆಯಾಗಿದ್ದಾರೆ. ಚೀನಾದಲ್ಲಿ ಕ್ಯಾನ್ಸರ್‌ನಿಂದ 27 ಲಕ್ಷ ಸಾವುಗಳು ಸಂಭವಿಸಿವೆ.

1990 ಮತ್ತು 2019ರ ನಡುವೆ ಏಷ್ಯಾದ 49 ದೇಶಗಳಲ್ಲಿ ನಡೆಸಿದ ಅಧ್ಯಯನದ ವರದಿ ಇದು. ಈ ವೇಳೆ 29 ಬಗೆಯ ಕ್ಯಾನ್ಸರ್‌ಗಳು ಪತ್ತೆಯಾಗಿದ್ದವು. ಈ ಪಟ್ಟಿಯಲ್ಲಿ ಜಪಾನ್ ಹೆಸರೂ ಇದೆ. 2019 ರಲ್ಲಿ 9 ಲಕ್ಷ ಹೊಸ ಕ್ಯಾನ್ಸರ್ ರೋಗಿಗಳು ಜಪಾನ್‌ನಲ್ಲಿ ಪತ್ತೆಯಾಗಿದ್ದರು. 4.4 ಲಕ್ಷ ಜನರ ಸಾವು ಸಂಭವಿಸಿತ್ತು.

ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಕಾರಣವೇನು ?

ಆರೋಗ್ಯ ತಜ್ಞರ ಪ್ರಕಾರ ಗುಟ್ಕಾ, ಪಾನ್ ಮಸಾಲಾ ಮತ್ತು ತಂಬಾಕು ಸೇವನೆ ಏಷ್ಯನ್ ದೇಶಗಳಲ್ಲಿ ಹೆಚ್ಚುತ್ತಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಳ ಮತ್ತು ಸಾವಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆಯ ಜೊತೆಗೆ ದಕ್ಷಿಣ ಏಷ್ಯಾದ ಭಾರತ, ನೇಪಾಳ, ಬಾಂಗ್ಲಾದೇಶದಲ್ಲಿ ತಂಬಾಕು ಸೇವನೆ ವಿಪರೀತವಾಗಿದೆ.

ಭಾರತದಲ್ಲಿ, 2019ರಲ್ಲಿ ಪತ್ತೆಯಾದ ಒಟ್ಟಾರೆ ಕ್ಯಾನ್ಸರ್‌ ರೋಗಿಗಳಲ್ಲಿ ಶೇ.28ರಷ್ಟು ಮಂದಿ ಬಾಯಿ ಮತ್ತು ತುಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 50 ಪ್ರತಿಶತದಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳು ತಂಬಾಕು ಸೇವನೆಯಿಂದಲೇ ಉಂಟಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...