ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ ಮಾಡ್ತಾರೆ. ಆದ್ರೆ ನಾಲ್ಕು ದಿನ ಬಾಳಿಕೆ ಬರಲ್ಲ ಅಂತಾ ಗೋಳಾಡ್ತಾರೆ. ಚಪ್ಪಲಿ ಖರೀದಿಸಿದ್ರೆ ಸಾಕಾಗೊಲ್ಲ, ಅದನ್ನು ಸುಂದರವಾಗಿ, ಬಾಳಿಕೆ ಬರುವಂತೆ ಇಟ್ಟುಕೊಳ್ಳುವುದು ಒಂದು ಕಲೆ.
ಚಪ್ಪಲಿಯನ್ನು ರ್ಯಾಕ್ ನಿಂದ ತೆಗೆದ ನಂತ್ರ ಹಾಗೆ ಧರಿಸಬೇಡಿ. ಅದರಲ್ಲಿರುವ ಧೂಳನ್ನು ಸ್ವಚ್ಛಗೊಳಿಸಿ ಚಪ್ಪಲಿ ಧರಿಸಬೇಕು. ಇಲ್ಲವಾದ್ರೆ ಚಪ್ಪಲಿಯಲ್ಲಿರುವ ಧೂಳು ನಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತೆ.
ಧೂಳಾಗಿರುವ ಚಪ್ಪಲಿಯನ್ನು ಎಂದೂ ಹಾಗೆ ಚಪ್ಪಲಿ ಸ್ಟ್ಯಾಂಡ್ ಮೇಲೆ ಇಡಬೇಡಿ. ಇದರಿಂದ ಚಪ್ಪಲಿ ಬಹು ಬೇಗ ಹಾಳಾಗುತ್ತದೆ. ಜೊತೆಗೆ ಹೊಳಪನ್ನು ಕಳೆದುಕೊಳ್ಳುತ್ತದೆ.
ಬೇಬಿ ಶೂ ಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಮೃದುವಾದ ಉತ್ಪನ್ನಗಳನ್ನು ಬಳಸಿ ಶೂ ಗಳನ್ನು ಕ್ಲೀನ್ ಮಾಡಿ.
ಚಪ್ಪಲಿ, ಶೂ ಕ್ಲೀನ್ ಮಾಡಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಕ್ರೀಂ, ಬ್ರೆಶ್, ಸ್ಪ್ರೇ ಸೇರಿದಂತೆ ಅನೇಕ ಉತ್ಪನ್ನಗಳಿದ್ದು, ಅದನ್ನು ಸರಿಯಾಗಿ ಬಳಸಿ.
ಸೂರ್ಯನ ಬಿಸಿಲು ನೇರವಾಗಿ ತಾಗುವಂತಹ ಜಾಗದಲ್ಲಿ ಚಪ್ಪಲಿಗಳನ್ನು ಇಡಬೇಡಿ. ಇದರಿಂದ ಚಪ್ಪಲಿ ಬಣ್ಣ ಕಳೆದುಕೊಳ್ಳುತ್ತದೆ.
ಬಟ್ಟೆಯ ಶೂ ಗಳನ್ನು ನೀರಿನಲ್ಲಿ ತೊಳೆಯುವುದು ಬಹಳ ಮುಖ್ಯ. ಹಾಗಂತ ತುಂಬಾ ಹೊತ್ತು ತೊಳೆಯುವುದು ಒಳ್ಳೆಯದಲ್ಲ.