ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಪರ್ಯಾವರಣ ಅಧ್ಯಯನ ವಿಭಾಗದ ಕಂಪ್ಯೂಟರ್ ನಿರ್ವಾಹಕರಾದ ವಿನೋದ್ ಕುಮಾರ್ ಗಣಕ ಯಂತ್ರವನ್ನು ತಮ್ಮ ದೇಹದ ವಿಸ್ತರಿತ ಭಾಗವೆಂಬಂತೆ ಮಾಡಿಕೊಂಡಿದ್ದಾರೆ.
ಟೈಪಿಂಗ್ ಮಾಡುವ ವಿಚಾರದಲ್ಲಿ ಸಖತ್ ಪಂಟರಾದ ವಿನೋದ್, ಈ ವಿಷಯದಲ್ಲಿ ಗಿನ್ನೆಸ್ ಪುಸ್ತಕದಲ್ಲಿ ಎಂಟು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಒಂದೇ ಕುಟುಂಬದ ಮೂವರು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ
ತಮ್ಮ ಮೂಗಿನಲ್ಲಿ ಟೈಪ್ ಮಾಡಬಲ್ಲ ವಿನೋದ್ ಕುಮಾರ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಟೈಪ್ ಮಾಡಬಲ್ಲವರಾಗಿದ್ದಾರೆ. ಸಾಲದೆಂಬಂತೆ ಮೌತ್‌ಸ್ಟಿಕ್ ಮೂಲಕವೂ ಟೈಪಿಸಬಲ್ಲ ವಿನೋದ್, ತಮ್ಮ ಮೊದಲ ದಾಖಲೆಯನ್ನು 2014ರಲ್ಲಿ ನಿರ್ಮಿಸಿದ್ದಾರೆ.
ವಿಶ್ವದ ನಂಬರ್ 1 ಆಲ್ ರೌಂಡರ್ ಪಟ್ಟಕ್ಕೇರಿದ ರವೀಂದ್ರ ಜಡೇಜಾ
ಒಂದೇ ಕೈನಲ್ಲಿ ಟೈಪ್ ಮಾಡುವುದು ಸಾಕಾಗದೆಂಬಂತೆ ಒಂದೇ ಬೆರಳಿನಲ್ಲೂ ಟೈಪ್ ಮಾಡುವ ಈ ಮಹಾನ್ ಚತುರಮತಿ, ತಮ್ಮ ಇತ್ತೀಚಿನ ದಾಖಲೆಯಾಗಿ ಟೆನಿಸ್ ಚೆಂಡೊಂದನ್ನು ನಿಮಿಷದೊಳಗೆ 205 ಬಾರಿ ಟಚ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇದು ಅವರ 9ನೇ ಗಿನ್ನೆಸ್ ದಾಖಲೆ.
ಬಾಲ್ಯದಲ್ಲಿ ಮಿಲ್ಖಾ ಸಿಂಗ್‌ರಿಂದ ಪ್ರೇರಿತರಾದ 41 ವರ್ಷದ ಚೌಧರಿ ಮೊದಲು ಅಥ್ಲೀಟ್ ಆಗುವ ಆಸೆ ಇಟ್ಟುಕೊಂಡಿದ್ದರು. ಸದ್ಯ, ವಿವಿಯ ವಿದ್ಯಾರ್ಥಿಗಳು ಹಾಗೂ ಅಗತ್ಯವಿದ್ದ ಮಂಧಿಗೆ ಕಂಪ್ಯೂಟರ್ ಕುರಿತು ತರಬೇತಿ ನೀಡುತ್ತಿದ್ದಾರೆ ವಿನೋದ್.