alex Certify ನೋಟಿಸ್​ ಅವಧಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚು ವೇತನ ನೀಡುತ್ತೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಟಿಸ್​ ಅವಧಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚು ವೇತನ ನೀಡುತ್ತೆ ಈ ಕಂಪನಿ

ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ನೌಕರ ರಾಜೀನಾಮೆ ಕೊಟ್ಟ ಬಳಿಕ ಮಾಡಬೇಕಾದ ನೋಟಿಸ್​ ಅವಧಿ ಹಿಂಸಾತ್ಮಕ. ಈ ಅವಧಿಯಲ್ಲಿ ಆ ನೌಕರನ ಕಾರ್ಯಕ್ಷಮತೆ ಬೇರೆಯದೇ ರೀತಿ ಇದ್ದರೆ, ಕಂಪನಿ ಆತನನ್ನು ವಿಭಿನ್ನವಾಗಿ ನೋಡುತ್ತದೆ.

ಆದರೆ, ಇಲ್ಲೊಂದು ಕಂಪನಿ ನೋಟಿಸ್​ ಅವಧಿಯನ್ನು ವಿಭಿನ್ನವಾಗಿಸಿದೆ. ಗೊರಿಲ್ಲಾ 76 ಹೆಸರಿನ ಅಮೆರಿಕಾದ ಮಾರ್ಕೆಟಿಂಗ್​ ಏಜೆನ್ಸಿ ತನ್ನ ಉದ್ಯೋಗಿಗಳಿಗಾಗಿ ಮಾಡಿರುವ ವಿಶಿಷ್ಟ ನೀತಿ ಜನಮನ ಗೆದ್ದಿದೆ.

ಸಂಸ್ಥೆಯು ತಮ್ಮ ಉದ್ಯೋಗಿಗಳಿಗೆ ನೋಟಿಸ್​ ಅವಧಿಯಲ್ಲಿ ವೇತನವನ್ನು ಶೇಕಡಾ 10ರಷ್ಟು ಹೆಚ್ಚಳದೊಂದಿಗೆ ಉಡುಗೊರೆಯಾಗಿ ನೀಡುತ್ತದೆ.

ಸಂಸ್ಥೆಯ ಸಂಸ್ಥಾಪಕರಾದ ಜಾನ್​ ಫ್ರಾಂಕೊ ಅವರು ಇತ್ತೀಚೆಗೆ ಲಿಂಕ್ಡಇನ್​ನಲ್ಲಿ ಈ ವಿಚಾರದ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಉದ್ಯೋಗಿಯ ರಾಜೀನಾಮೆಯನ್ನು ಹೇಗೆ ಮತ್ತು ಏಕೆ ಉತ್ತೇಜಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಜಾನ್​ ಪ್ರಕಾರ, ಉದ್ಯೋಗಿ ತಮ್ಮ ಆರು ವಾರಗಳ ನೋಟಿಸ್​ ನೀಡಿದ ಕ್ಷಣ, ಕಂಪನಿಯು ಅವರ ಸಂಬಳದಲ್ಲಿ 10 ಪ್ರತಿಶತದಷ್ಟು ಹೆಚ್ಚಳವನ್ನು ನೀಡುತ್ತದೆ. ಮತ್ತು ನಮಗೆ ಯಾವುದೇ ಹಾರ್ಡ್​ ಫೀಲಿಂಗ್​ ಇಲ್ಲ ಎಂದು ಭರವಸೆ ನೀಡಲಾಗುತ್ತದೆಯಂತೆ.

ಉದ್ಯೋಗಿಯು ಗೊರಿಲ್ಲಾವನ್ನು ತೊರೆಯುವ ನಿರ್ಧಾರವನ್ನು ನಮಗೆ ತಿಳಿಸಿದಾಗ ಮತ್ತು ಅವರು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ ಎಂದು ನಮಗೆ ತಿಳಿಸಿದಾಗ, ನಮಗೆ ಕನಿಷ್ಠ ಆರು ವಾರಗಳ ನೋಟಿಸ್​ ನೀಡುವ ಯಾವುದೇ ಪೂರ್ಣ ಸಮಯದ ಉದ್ಯೋಗಿಗೆ ಅವರು ಮುಂದುವರಿಯುವಷ್ಟು ದಿನವೂ ಶೇ.10 ಹೆಚ್ಚು ಸಂಬಳವನ್ನು ನೀಡಲಾಗುತ್ತದೆ. ಅವರು ಮೂರು ತಿಂಗಳೊಳಗೆ ಹೋಗಬೇಕೆಂದು ನಾವು ಕೇಳುತ್ತೇವೆ ಎಂದು ತಿಳಿಸಿದ್ದಾರೆ.

ಉದ್ಯೋಗಿಯು ಉತ್ತಮ ಆಯ್ಕೆಗಳನ್ನು ಹುಡುಕಲು ಪುಶ್​ ಪಡೆಯುವುದು ಮಾತ್ರವಲ್ಲದೆ, ಸ್ವಿಚ್​ ಅನ್ನು ಸಾಧ್ಯವಾದಷ್ಟು ಸುಗಮವಾಗಿಸಲು ಕಂಪನಿಗೆ ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...