ಇತ್ತೀಚಿನ ದಿನಗಳಲ್ಲಿ ಕಿಡ್ನಿಯ ಸಮಸ್ಯೆ ಹಲವು ಜನರನ್ನು ಕಾಡುತ್ತಿದೆ. ಅದರಲ್ಲಿ ಮಕ್ಕಳು ಹೆಚ್ಚಾಗಿ ಕಿಡ್ನಿ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಕಿಡ್ನಿ ಸಮಸ್ಯೆಯ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಿ, ಅದನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬೇಡಿ.
ಸಾಮಾನ್ಯವಾಗಿ ಮಕ್ಕಳು ನಿದ್ರೆಯಲ್ಲಿದ್ದಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಎಲ್ಲಾ ಮಕ್ಕಳಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ ನಿಜ.
ಆದರೆ ಇದು ಕೆಲವು ಮಕ್ಕಳಲ್ಲಿ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಾದ ವೆಸಿಕೋರೆಟರಲ್ ರಿಫ್ಲಕ್ಸ್ ನಿಂದ ಉಂಟಾಗುತ್ತದೆಯಂತೆ.
ಮಕ್ಕಳಲ್ಲಿ ಈ ಸಮಸ್ಯೆಯಿದ್ದಾಗ ಮೂತ್ರ ಕೋಶವು ಸರಿಯಾಗಿ ಖಾಲಿಯಾಗಲು ವಿಫಲವಾಗುತ್ತದೆ. ಇದರಿಂದ ಮೂತ್ರವು ಕಿಡ್ನಿಗಳಿಗೆ ಒತ್ತಡ ಉಂಟು ಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಮೂತ್ರದ ಸೋಂಕು ಉಂಟಾಗುತ್ತದೆ. ಹೀಗಾಗಿ ಆಂತರಿಕ ಅಂಗಗಳು ಹಾನಿಗೊಳಗಾಗುತ್ತದೆ.
ಹಾಗಾಗಿ ಮಕ್ಕಳು ಆಗಾಗ ಮೂತ್ರ ವಿಸರ್ಜನೆ ಮಾಡುವುದು, ಜ್ವರದ ಸಮಸ್ಯೆಗೆ ಒಳಗಾಗುವುದು, ಮೂತ್ರದಲ್ಲಿ ನೊರೆ ಕಂಡುಬಂದರೆ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.