alex Certify ʼಹೀಟ್ ವೇʼ ಚರ್ಚೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೀಟ್ ವೇʼ ಚರ್ಚೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ

ಯುನೈಟೆಡ್​ ಕಿಂಗ್​ಡಂನಲ್ಲೀಗ ಹೀಟ್​ ವೇವ್​ನದ್ದೇ ಚರ್ಚೆ. ಏಕೆಂದರೆ ಹಲವು ಸ್ಥಳಗಳಲ್ಲಿ ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಯುಕೆ ಸುತ್ತಮುತ್ತಲಿನ ಜನರು ಶಾಖದ ಅಲೆ ನಿಭಾಯಿಸಲು ಪ್ರಯತ್ನಿಸುತ್ತಿರುವಾಗ, ದೇಶದ ಜನಪ್ರಿಯ ಚಾನೆಲ್​ನಲ್ಲಿ ಶಾಖದ ತೀವ್ರತೆ ಕುರಿತು ಪ್ರಸಾರವಾದ ಕಾರ್ಯಕ್ರಮವು ಟೀಕೆಗೆ ಒಳಗಾಯಿತು.

ಜೂನ್​ 14 ರಂದು ಜಿಬಿ ನ್ಯೂಸ್​ನಲ್ಲಿ ಬೆಳಗಿನ ಶೋ ʼಟು ದಿ ಪಾಯಿಂಟ್ʼ​ನಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಕಾರ್ಯಕ್ರಮ ನಿರ್ವಾಹಕರು ಹವಾಮಾನಶಾಸ್ತ್ರಜ್ಞ ಜಾನ್​ ಹ್ಯಾಮಂಡ್​ ಅವರನ್ನು ʼಎಂಜಾಯಿಂಗ್​ ದಿ ಸನ್​ಶೈನ್​’ ಎಂದು ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಹ್ಯಾಮಂಡ್​, ಹವಾಮಾನವು ಆಹ್ಲಾದಕರವಾಗಿ ಕಂಡುಬಂದರೂ ಕೆಲವೇ ದಿನಗಳಲ್ಲಿ ತಾಪಮಾನವು 40 ಡಿಗ್ರಿ ತಲುಪುವ ನಿರೀಕ್ಷೆಯಿದೆ. ಮುಂಬರುವ ಹೀಟ್​ವೇವ್​ನ ಬಗ್ಗೆ ಪ್ರತಿಪಾದಿಸುತ್ತಾ, “ಮುಂದಿನ ವಾರದ ಆರಂಭದಲ್ಲಿ ನೂರಾರು ಸಾವುಗಳು ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಮುಂದಿರುವ ಚಾರ್ಟ್​ಗಳು ಭಯಾನಕವಾಗಿ ಕಾಣುತ್ತಿವೆ, ಆದ್ದರಿಂದ ನಾವೆಲ್ಲರೂ ಉತ್ತಮ ಹವಾಮಾನ ಎದುರು ನೋಡುತ್ತಿದ್ದೇವೆ ಎಂದರು.

ಈ ಎಚ್ಚರಿಕೆಯ ಮಾತುಗಳ ಹೊರತಾಗಿಯೂ, ಕಾರ್ಯಕ್ರಮದ ಹೋಸ್ಟ್​ ಆ ಹವಾಮಾನಶಾಸ್ತ್ರಜ್ಞರ ಮಾತಿಗೆ ತಡೆ ಹಾಕಿ ಹವಾಮಾನದಿಂದ ನಾವು ಸಂತೋಷವಾಗಿರಬೇಕೆಂದು ಬಯಸುತ್ತೇನೆ. ನಿಮ್ಮೆಲ್ಲರನ್ನು ಸ್ವಲ್ಪಮಟ್ಟಿಗೆ ಗಾಬರಿ ಮಾಡಿಸಿದ ಹವಾಮಾನಶಾಸ್ತ್ರಜ್ಞರಿಗೆ ಏನಾದರೂ ಸಂಭವಿಸಿದೆಯೇ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಲ್ಲದೇ, “ನಾವು ಯಾವಾಗಲೂ ಬಿಸಿ ವಾತಾವರಣವನ್ನು ಹೊಂದಿದ್ದೇವೆ ಮತ್ತು 76 ರ ಬೇಸಿಗೆಯಲ್ಲಿ ಬಿಸಿಯಾಗಿರಲಿಲ್ಲವೇ?’ ಎಂದು ಪುನಃ ಪ್ರಶ್ನೆ ಹಾಕುತ್ತಾಳೆ.

ಅದಕ್ಕೆ ಉತ್ತರ ನೀಡಿದ ಹ್ಯಾಮಂಡ್​, 1976ರ ಬೇಸಿಗೆಯಲ್ಲಿ ಹೀಟ್​ವೇವ್​ ಒಂದು ಕೆಟ್ಟ ಘಟನೆಯಾಗಿದೆ. “ಮುಂದಿನ ವಾರದಲ್ಲಿ ಶಾಖದಿಂದಾಗಿ ಅನೇಕರು ಸಾಯುತ್ತಾರೆ ಎಂಬ ಅಂಶದ ಬಗ್ಗೆ ನಾವು ತುಂಬಾ ಹಗುರವಾಗಿ ಪರಿಗಣಿಸಬಾರದು ಎಂದು ನಾನು ಭಾವಿಸುತ್ತೇನೆ. ಎಂದರು.

ಈ ಕಾರ್ಯಕ್ರಮದ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ಅನೇಕರು ಅದನ್ನು ಡೋಂಟ್​ ಲುಕ್​ ಅಪ್​ ಚಲನಚಿತ್ರಕ್ಕೆ ಸಂಬಂಧಿಸಿದೆ ಎಂದಿದ್ದಾರೆ. ಆ ಚಿತ್ರದಲ್ಲಿ ಇಬ್ಬರು ಖಗೋಳಶಾಸ್ತ್ರಜ್ಞರನ್ನು ಟಿವಿ ಹೋಸ್ಟ್​ಗಳು ಹೊರಕಳಿಸಿದ್ದರು. ಈ ಕ್ಲಿಪ್​ ಮೂಲಕ “ಡೋಂಟ್​ ಲುಕ್​ ಅಪ್​’ ಟ್ರೆಂಡ್​ ಕೂಡ ಆಯಿತು.

https://twitter.com/cs1891/status/1549769261895368705?ref_src=twsrc%5Etfw

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...