ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ.
ಚೀನಾದ ಅತಿ ದೊಡ್ಡ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾದ ಗ್ರೇಟ್ ವಾಲ್ ಮೋಟರ್ಸ್, ಇದೀಗ ಮೈಕ್ರೋ-ಎಸ್ಯುವಿಯೊಂದನ್ನು ಬಿಡುಗಡೆ ಮಾಡಿದೆ. ಟ್ಯಾಂಕ್ 100 ಹೆಸರಿನ ಈ ಮೈಕ್ರೋ-ಎಸ್ಯುವಿ ಥೇಟ್ ಸುಜ಼ುಕಿಯ ಜಿಮ್ನಿಯಂತೆಯೇ ಇದೆ.
ರೈತರಿಗೆ ಮತ್ತೊಂದು ಶುಭ ಸುದ್ದಿ: ಇನಾಂ ಸಾಗುವಳಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮಲ್ಟಿ-ಸ್ಲೇಟೆಡ್ ಗ್ರಿಲ್, ದುಂಡು ಹೆಡ್ಲ್ಯಾಂಪ್ಗಳು, ಎಲ್ಇಡಿ ಡಿಆರ್ಎಲ್ಗಳು ಮತ್ತು ತಿರುವಿನ ಸಿಗ್ನಲ್ಗಳನ್ನು ಸಹ ಟ್ಯಾಂಕ್ 100 ಹೊಂದಿದೆ. ಮುಂಭಾಗದ ಬಂಪರ್ನಲ್ಲಿ ಎರಡು ಫಾಗ್ ದೀಪಗಳು ಸಹ ಇವೆ. ಮೂರು ಬಾಗಿಲಿನ ಡಿಸೈನ್ನಲ್ಲಿ ಜಿಮ್ನಿ ಇದ್ದರೆ, ಟ್ಯಾಂಕ್ 100 ಅದಾಗಲೇ ಮೂರು ಮತ್ತು ಐದು ಬಾಗಿಲುಗಳ ಆಯ್ಕೆಯಲ್ಲಿ ಸಿಗುತ್ತಿದೆ.
ಚಕ್ರದ ಆರ್ಚ್ಗಳು, ಹಿಂಬದಿಯ ಪ್ಯಾನೆಲಿಂಗ್, ಬಾಗಿಲಿನ ಹ್ಯಾಂಡಲ್ಗಳು, ಕಪ್ಪು ವಿಂಗ್ ಕನ್ನಡಿಗಳು, ಸೈಡ್ ವಿಂಡೋ ಪ್ಯಾನೆಲ್ಗಳು ಸೇರಿದಂತೆ ಜಿಮ್ನಿಯಂತೆಯೇ ಕಾಣುತ್ತೆ ಟ್ಯಾಂಕ್ 100.