ಕೆಲವೊಂದು ಮಾರಣಾಂತಿಕ ರೋಗಗಳು ಅರಿವಿಲ್ಲದೇ ನಮ್ಮನ್ನು ಆವರಿಸಿಕೊಂಡುಬಿಡುತ್ತವೆ. ಈ ಕಾಯಿಲೆಗಳ ಸಣ್ಣಪುಟ್ಟ ಲಕ್ಷಣಗಳು ನಮ್ಮ ಅರಿವಿಗೇ ಬರುವುದಿಲ್ಲ. ಹಾಗಾಗಿ ಇಂತಹ ಕಾಯಿಲೆಗಳಿಂದ ದೂರವಿರಬೇಕೆಂದರೆ ನಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಈ ಬದಲಾವಣೆ ಕೆಲವು ಗಂಭೀರ ಕಾಯಿಲೆಗಳ ಪರಿಣಾಮವಾಗಿರಬಹುದು. ಕೈಗಳಲ್ಲಿ ಕೂಡ ಇಂತಹ ಮೂರು ಮಾರಣಾಂತಿಕ ಕಾಯಿಲೆಗಳ ಸಂಕೇತಗಳು ಕಾಣಿಸಿಕೊಳ್ಳುತ್ತವೆ.
ಕೈ ಬೆರಳುಗಳು, ಮಣಿಕಟ್ಟು ಮತ್ತು ಕೈಯಲ್ಲಿನ ಊತವು ಮಾರಣಾಂತಿಕ ಕಾಯಿಲೆಗಳ ಆರಂಭಿಕ ಚಿಹ್ನೆಯಾಗಿರಬಹುದು. ಇದು ನೀರಿನ ಶೇಖರಣೆಯಿಂದ ಉಂಟಾಗುವ ನೀರಿನ ಧಾರಣದ ಪರಿಣಾಮವೂ ಆಗಿರಬಹುದು.
ಕೈಗಳಲ್ಲಿ ಊತಕ್ಕೆ ಕಾರಣವಾಗುವ ರೋಗಗಳು…
ಮೂತ್ರಪಿಂಡ ಕಾಯಿಲೆ
ದೇಹವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ಎದುರಿಸುತ್ತಿದ್ದರೆ ದ್ರವದ ಸಮತೋಲನವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಎಡಿಮಾ ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡದ ದುರ್ಬಲತೆಯ ಇತರ ಲಕ್ಷಣಗಳೆಂದರೆ ವಾಂತಿ ಮತ್ತು ಮೂತ್ರದಲ್ಲಿ ರಕ್ತ, ವಾಕರಿಕೆ, ಆಯಾಸ, ಕಡಿಮೆ ಮೂತ್ರ ವಿಸರ್ಜನೆ.
ಯಕೃತ್ತು ವೈಫಲ್ಯ
ಯಕೃತ್ತಿನ ಸಮಸ್ಯೆಗಳಿಂದಾಗಿ ದೇಹದಲ್ಲಿನ ಪ್ರೋಟೀನ್ ಕೊರತೆಯುಂಟಾಗಬಹುದು. ಆಗ ರಕ್ತದಲ್ಲಿನ ದ್ರವದ ಪ್ರಮಾಣ ಅಸಮತೋಲನಕ್ಕೀಡಾಗುತ್ತದೆ. ಇದರಿಂದಾಗಿ ಅನೇಕ ಬಾರಿ ಕೈ, ಕಾಲು ಮತ್ತು ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಯಕೃತ್ತು ಹಾನಿಗೊಳಗಾದಾಗ ಹೊಟ್ಟೆ ನೋವು, ಕೈ-ಕಾಲುಗಳಲ್ಲಿ ತುರಿಕೆ ಮತ್ತು ಗಾಢ ಬಣ್ಣದ ಮೂತ್ರದಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಹೃದಯಾಘಾತ
ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ದೇಹದ ವಿವಿಧ ಅಂಗಗಳಲ್ಲಿ ದ್ರವ ಶೇಖರಣೆಯಾಗುತ್ತದೆ. ಇದರಿಂದಾಗಿ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇಂತಹ ಸಂದರ್ಭದಲ್ಲಿ ಕೂಡ ಕೈಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಹೃದಯ ವೈಫಲ್ಯದ ಇತರ ಲಕ್ಷಣಗಳೆಂದರೆ ನಿರಂತರ ಕೆಮ್ಮು, ಆಯಾಸ, ದೌರ್ಬಲ್ಯ, ತ್ವರಿತ ಹೃದಯ ಬಡಿತ.