ಅಂದು ತನ್ನ 10ನೇ ವಯಸ್ಸಿನಲ್ಲಿ ಕೆಲಸ ಮಾಡ್ತಿದ್ದ ಬಾಲಕ ಇಂದು ಪ್ರತಿಷ್ಠಿತ ಕಂಪನಿಯ ಸಿಇಓ ಆಗಿದ್ದು ಅವರ ಕಂಪನಿಯ ಮೌಲ್ಯ 2 ಸಾವಿರ ಕೋಟಿ ರೂಪಾಯಿ ಆಗಿದೆ. ಒಂದು ಕಾಲದಲ್ಲಿ ಕಡುಬಡತನದಲ್ಲಿದ್ದ ವ್ಯಕ್ತಿ ಇಂದು ಅನೇಕರಿಗೆ ಕೆಲಸ ಕೊಟ್ಟಿದ್ದಾರೆ. ಅವರೇ iD ಫ್ರೆಶ್ ಫುಡ್‌ನ CEO ಮುಸ್ತಫಾ ಪಿಸಿ. ಇಂದು 2 ಸಾವಿರ ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿರುವ ಮುಸ್ತಾಪ ಅವರು ತಮ್ಮ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ.
ದಿ ನಿಯಾನ್ ಶೋ ನಲ್ಲಿ ಮಾತಾಡ್ತಾ, ಮುಸ್ತಫಾ ಅವರು ತಮ್ಮ ಆರಂಭಿಕ ಜೀವನದ ಹಲವು ಘಟನೆಗಳನ್ನು ಹಂಚಿಕೊಂಡರು. ಬಾಲ್ಯದಲ್ಲಿ ಅವರು ತಮ್ಮ ಒಡಹುಟ್ಟಿದವರೊಂದಿಗೆ ತಂದೆಗೆ ನೆರವಾಗಲು ಶುಂಠಿ ಫಾರ್ಮ್ ನಲ್ಲಿ ಕೆಲಸ ಮಾಡ್ತಿದ್ದನ್ನ ಸ್ಮರಿಸಿಕೊಂಡರು.
ದಿನಕ್ಕೆ ಕೇವಲ 10 ರೂ. ಗಳಿಸುತ್ತಿದ್ದ ಮುಸ್ತಫಾ ಅವರ ತಂದೆ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿದ್ದರು. ಮುಸ್ತಫಾ ಅವರು ಕೇವಲ ಹತ್ತು ವರ್ಷ ವಯಸ್ಸಿನಲ್ಲಿದ್ದಾಗ ಗ್ರಾಮದಲ್ಲಿ ಉರುವಲು ಮಾರಾಟದಂತಹ ಕೆಲಸಗಳನ್ನು ಮಾಡಿದ್ದರಂತೆ. ತಮ್ಮ ತಂದೆಗೆ ಜಮೀನಿನಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ತಮ್ಮ ಸಂಪಾದನೆಯ ಪ್ರತಿ ಪೈಸೆಯನ್ನೂ ಉಳಿಸಿ 150 ರೂಪಾಯಿಗೆ ಮೇಕೆ ಕೊಂಡುಕೊಂಡರು. ಇದು ಅವರ ಮೊದಲ ಆಸ್ತಿಯಾಗಿತ್ತು ಎಂದು ಮುಸ್ತಫಾ ಸ್ಮರಿಸಿದ್ದಾರೆ.
ವ್ಯವಹಾರದೊಂದಿಗಿನ ಈ ಆರಂಭಿಕ ಅನುಭವವು ಮುಸ್ತಫಾ ಅವರ ಭವಿಷ್ಯದ ಯಶಸ್ಸಿಗೆ ವೇದಿಕೆಯಾಯಿತು. ಸಣ್ಣ ಹೂಡಿಕೆಯನ್ನು ಗಣನೀಯ ಆಸ್ತಿಯಾಗಿ ಪರಿವರ್ತಿಸುವ ಅವರ ಸಾಮರ್ಥ್ಯವು ಐಡಿ ಫ್ರೆಶ್ ಫುಡ್‌ನ ಸೃಷ್ಟಿಗೆ ಮುನ್ನುಡಿ ಬರೆದಿದೆ. ಇವರ ಸ್ಪೂರ್ತಿದಾಯಕ ಕಥೆ ಜನರ ಮೇಲೆ ಪ್ರಭಾವ ಬೀರಿದೆ.