ಕೇರಳದ ಗ್ರಾಮವೊಂದರಲ್ಲಿ ಜನಿಸಿದ ಮುಸ್ತಫಾ ತಂದೆ ಒಬ್ಬ ದಿನಗೂಲಿ ನೌಕರ. ಖುದ್ದು ಶಿಕ್ಷಣದಿಂದ ವಂಚಿತರಾದ ಮುಸ್ತಫಾ ತಂದೆಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹದಾಸೆ.
ಆರನೇ ಕ್ಲಾಸಿನಲ್ಲಿ ಓದುತ್ತಿರುವ ವೇಳೆ ತಮ್ಮ ತಂದೆಗೆ ನೆರವಾಗಲು ಶಾಲೆ ಬಿಡುವ ಆಲೋಚನೆ ಮಾಡಿದ್ದರು ಮುಸ್ತಫಾ. “ಪ್ರತಿನಿತ್ಯ 10 ರೂಪಾಯಿ ಸಂಪಾದಿಸುತ್ತಿದ್ದ ನಮಗೆ ದಿನವೊಂದಕ್ಕೆ ಮೂರು ಹೊತ್ತಿನ ಊಟ ದೂರದ ಕನಸೇ ಆಗಿತ್ತು. ಶಿಕ್ಷಣಕ್ಕಿಂತ ಊಟವೇ ಮುಖ್ಯ ಎಂದು ನಾನು ಈಗ ಹೇಳುತ್ತೇನೆ” ಎಂದು ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಮುಸ್ತಫಾ.
ಶಿಕ್ಷಕರೊಬ್ಬರ ಮಧ್ಯ ಪ್ರವೇಶದಿಂದ ಶಾಲೆಗೆ ಮರಳಿದ ಮುಸ್ತಫಾ, ಮುಂದೆ ಉನ್ನತ ಶಿಕ್ಷಣ ಪೂರೈಸಿ ದೊಡ್ಡ ಸಂಬಳದ ಕೆಲಸವೊಂದನ್ನು ಸೇರುತ್ತಾರೆ. ಇದಾದ ಬಳಿಕ ತಮ್ಮದೇ ಉದ್ಯಮ ಸೃಷ್ಟಿಸಲು ಮುಂದಾದ ಮುಸ್ತಫಾ ತಾಜಾ ಆಹಾರ ಪೂರೈಕೆ ಮಾಡುವ ದೇಶದ ಮುಂಚೂಣಿ ಕಂಪನಿಗಳಲ್ಲಿ ಒಂದರ ಮಾಲೀಕರಾಗಿದ್ದಾರೆ.
ಐಡಿ ಫ್ರೆಶ್ ಫುಡ್ನ ಮುಸ್ತಫಾಗೆ ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರೊಬ್ಬರು ಶಾಲೆಗೆ ಮರಳಲು ಮನವರಿಕೆ ಮಾಡಿಕೊಟ್ಟು, ಅವರಿಗೆ ಉಚಿತವಾಗಿ ಪಾಠ ಹೇಳಿಕೊಟ್ಟಿದ್ದಲ್ಲದೇ ಕಾಲೇಜು ವ್ಯಾಸಂಗಕ್ಕೆ ಶುಲ್ಕವನ್ನೂ ತಾವೇ ಭರಿಸಿದ್ದರಂತೆ.
ಶಿಕ್ಷಣ ಪೂರೈಸಿದ ಬಳಿಕ ವಿದೇಶಕ್ಕೆ ತೆರಳಿದ ಮುಸ್ತಫಾ, ಅಲ್ಲೊಂದಷ್ಟು ದಿನ ಕೆಲಸ ಮಾಡಿಕೊಂಡು ತಮ್ಮದೇ ಉದ್ಯಮ ಆರಂಭಿಸಲು ನಿರ್ಧರಿಸಿ ಭಾರತಕ್ಕೆ ಮರಳಿದ್ದಾರೆ. ಇಡ್ಲಿ-ದೋಸೆ ಸಂಪಣವನ್ನು ವರ್ತಕರೊಬ್ಬರು ಪೌಚ್ನಲ್ಲಿ ಮಾರುತ್ತಿದ್ದದ್ದನ್ನು ಕಂಡ ಮುಸ್ತಫಾ ಸಹೋದರನಿಗೆ ದೋಸೆ ಹಿಟ್ಟು ಪೂರೈಸುವ ಕಂಪನಿ ಸೃಷ್ಟಿಸುವ ಕನಸು ಚಿಗುರೊಡೆದಿದೆ.
ಆರಂಭದಲ್ಲಿ 50,000 ರೂಪಾಯಿ ಹೂಡಿಕೆಯೊಂದಿಗೆ ಕಂಪನಿಗೆ ಚಾಲನೆ ಕೊಟ್ಟ ಮುಸ್ತಫಾ, 50 ಚದರ ಅಡಿ ಅಡುಗೆ ಮನೆಯಲ್ಲಿ ಗ್ರೈಂಡರ್, ಮಿಕ್ಸರ್ ಹಾಗೂ ತೂಕದ ಯಂತ್ರದೊಂದಿಗೆ ಕೆಲಸ ಆರಂಭಿಸಿದ್ದಾರೆ.
“ದಿನವೊಂದಕ್ಕೆ 100 ಪ್ಯಾಕೆಟ್ಗಳನ್ನು ಮಾರಲು ನಮಗೆ 9 ತಿಂಗಳು ಕಾಯಬೇಕಾಯಿತು” ಎನ್ನುವ ಮುಸ್ತಫಾ ಈಗ ತಮ್ಮೆಲ್ಲಾ ಉಳಿತಾಯವನ್ನು ಉದ್ಯಮದ ಮೇಲೆ ಹೂಡಿದ್ದಾರೆ.
ಎಂಟು ವರ್ಷಗಳ ನಿರಂತರ ಪರಿಶ್ರಮದ ಬಳಿಕ ಐಡಿ ಫುಡ್ಸ್ ಕಂಪನಿ ಈಗ 2000 ಕೋಟಿ ರೋಪಾಯಿ ಮೌಲ್ಯದ ಕಂಪನಿಯಾಗಿದ್ದು, 2020-21ರ ವಿತ್ತೀಯ ವರ್ಷದಲ್ಲಿ 294 ಕೋಟಿ ರೂ.ಗಳ ನಿವ್ವಳ ಲಾಭ ಮಾಡಿದೆ.
ಒಂದೇ ಕುಟುಂಬಕ್ಕೆ ಎಷ್ಟು ಅಂತಾ ಅವಕಾಶ ನೀಡೋದು….? ಬಿಎಸ್ವೈಗೆ ಯತ್ನಾಳ್ ಪರೋಕ್ಷ ಟಾಂಗ್
2018ರಲ್ಲಿ ಹಾರ್ವರ್ಡ್ ವಿವಿಯಲ್ಲಿ ಅತಿಥಿಯಾಗಿ ಮಾತನಾಡಿದ ಮುಸ್ತಫಾ, ಆ ವೇಳೆ ತಮ್ಮ ಬದುಕಿಗೆ ಹೊಸ ದಿಕ್ಕು ಕೊಟ್ಟ ಶಿಕ್ಷಕರು ಹಾಗೂ ಹೆತ್ತವರ ಶ್ರಮವನ್ನು ಸ್ಮರಿಸಿದ್ದರು.