ಸ್ಯಾಮ್ ಆಲ್ಟಮನ್ ಯಶಸ್ವಿ ಉದ್ಯಮಿಗಳಲ್ಲೊಬ್ಬರು. ಸ್ಯಾಮ್‌ಗೆ ಈಗ 38ರ ಹರೆಯ. AI ಸ್ಟಾರ್ಟ್ಅಪ್ OpenAI ನ CEO ಆಗಿರೋ ಸ್ಯಾಮ್ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ. ದಿನಕ್ಕೆ 12-14 ಗಂಟೆಗಳ ಕಾಲ ಕೆಲಸ ಮಾಡಿದರೂ ಎಲ್ಲಾ ಸಮಯದಲ್ಲಿ ಫ್ರೆಶ್ ಆಗಿ ಕಾಣ್ತಾರೆ. ಅವರ ಈ ಫಿಟ್ನೆಸ್‌ಗೆ ಕಾರಣ ಉತ್ತಮ ಆಹಾರ ಮತ್ತು ಸಮತೋಲಿತ ಜೀವನ.
ಸ್ಯಾಮ್ ಆಲ್ಟ್‌ಮನ್ ಅನೇಕ ವರ್ಷಗಳಿಂದ ಪ್ರತಿದಿನ 15 ಗಂಟೆ ಉಪವಾಸವಿರುತ್ತಾರೆ. 9 ಗಂಟೆಗಳ ಸಮಯದ ಚೌಕಟ್ಟಿನಲ್ಲಿ ಮಾತ್ರ ಆಹಾರ ಸೇವಿಸುತ್ತಾರೆ. ಅವರು ತಮ್ಮ ನಿದ್ರೆ, ಆಹಾರ ಮತ್ತು ಕೆಲಸದ ವೇಳಾಪಟ್ಟಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.
ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುತ್ತಾರೆ. ಬೆಳಗ್ಗೆ ಎದ್ದ ನಂತರ 1 ಕಪ್ ಕಾಫಿ ಕುಡಿಯುತ್ತಾರೆ ಅಷ್ಟೆ, ಉಪಹಾರ ಸೇವಿಸುವುದಿಲ್ಲ.
ವಿಶೇಷ ಅಂದ್ರೆ ಸ್ಯಾಮ್ ಬಾಲ್ಯದಿಂದಲೂ ಸಸ್ಯಾಹಾರಿ. ಅವರು ಕೆಲವೊಮ್ಮೆ ಪ್ರೋಟೀನ್ ಶೇಕ್ಸ್ ಕುಡಿಯುತ್ತಾರೆ. ಆದರೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದಿಲ್ಲ. ಲಘುವಾದ ಮತ್ತು ಬೇಯಿಸಿದ ಆಹಾರವನ್ನೇ ತಿನ್ನುತ್ತಾರೆ. ಸಿಹಿತಿಂಡಿಗಳಿಂದ ದೂರವಿರುತ್ತಾರೆ.
ವಾರದಲ್ಲಿ ಮೂರು ದಿನ ಜಿಮ್‌ನಲ್ಲಿ ವೇಯ್ಟ್ ಟ್ರೇನಿಂಗ್ ಮಾಡುತ್ತಾರೆ. ನಿಯಮಿತವಾದ ಆಹಾರದ ಮೂಲಕವೇ ತಮ್ಮ ವಯಸ್ಸನ್ನು ಹಿಡಿದಿಟ್ಟುಕೊಂಡಿದ್ದಾರೆ ಈ ಉದ್ಯಮಿ. ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ತಾರೆ. ದೇಹದಲ್ಲಿ ಯಾವೆಲ್ಲ ಪೋಷಕಾಂಶಗಳ ಕೊರತೆಯಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಾರೆ.
ಸ್ಯಾಮ್‌ಗೆ ನಿದ್ರೆಯನ್ನು ಸ್ಲಿಪ್ ಟ್ರ್ಯಾಕರ್ ಮೂಲಕ ಟ್ರ್ಯಾಕ್ ಮಾಡುವ ಅಭ್ಯಾಸವಿದೆ. ಯಾವಾಗಲೂ ತಂಪಾದ, ಕತ್ತಲೆ ಇರುವ ಮತ್ತು ಶಾಂತ ಸ್ಥಳದಲ್ಲಿ ಮಲಗುತ್ತಾರೆ. ಮಲಗಲು ವಿಶೇಷ ರೀತಿಯ ಹಾಸಿಗೆಗಳನ್ನು ಸಹ ಬಳಸುತ್ತಾರೆ. ಅವರ ಯಶಸ್ಸಿನ ರಹಸ್ಯವೆಂದರೆ ಪ್ಲಾನಿಂಗ್. ಪ್ರತಿದಿನ, ಪ್ರತಿ ತಿಂಗಳು ಮತ್ತು ಪ್ರತಿ ವರ್ಷ ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿಕೊಳ್ತಾರೆ. ಇವು ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತವೆ ಮತ್ತು ದಾರಿ ತಪ್ಪಲು ಬಿಡುವುದಿಲ್ಲ. ಸ್ಯಾಮ್ ಆಲ್ಟ್‌ಮ್ಯಾನ್ ಅವರಂತೆಯೇ ನಾವು ಕೂಡ ಉತ್ತಮ ಆಹಾರ, ನಿಯಮಿತ ವ್ಯಾಯಾಮ ಮತ್ತು ನಿದ್ರೆಯಿಂದ ದೀರ್ಘಕಾಲ ಆರೋಗ್ಯವಾಗಿರಬಹುದು.