ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿಯಾವ ಗ್ರಾಮದಲ್ಲಿ ಏನು ಕೆಲಸವನ್ನು ಸರಕಾರ ಮಾಡುತ್ತಿದೆ. ಅದರ ಕಾಮಗಾರಿ ಎಲ್ಲಿಗೆ ತಲುಪಿದೆ ಎಂದು ನಿಗಾ ಇರಿಸಲು ಕೂಡ ಅಧಿಕಾರಿಗಳಿಗೆ ಆಗುತ್ತಿಲ್ಲವೋ ಏನೋ? ಇನ್ನು ಕೆಲವರಿಗೆ ತಮ್ಮ ಕುರ್ಚಿಯ ಚಿಂತೆಯೊಂದೇ ಆಗಿರಬೇಕು.
ಯಾಕೆಂದರೆ, ಬಿಜ್ನೋರ್‌ನಲ್ಲಿ ಗಂಗಾ ನದಿಗೆ ಅಡ್ಡವಾಗಿ ಎರಡು ವರ್ಷಗಳಿಂದ ನಿರ್ಮಾಣವಾಗಿ ನಿಂತಿರುವ ಸೇತುವೆಗೆ ಸಂಪರ್ಕ ರಸ್ತೆಯೇ ಇಲ್ಲ. ಕೇವಲ ಸ್ಮಾರಕದಂತೆ ನಿಂತಿದೆ ಅಷ್ಟೇ!
ಉತ್ತರಾಖಂಡ, ಹರಿಯಾಣ, ಪಂಜಾಬ್‌ನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಆಗಬೇಕಿದ್ದ ಬಿಜ್ನೋರ್‌ನ ವ್ಯರ್ಥ ಸೇತುವೆ ಇದುವರೆಗೂ ಸರಕಾರ ಸುರಿದಿರುವುದು ಬರೋಬ್ಬರು 40 ಕೋಟಿ ರೂ.ಗಳಂತೆ.
2015ರಲ್ಲಿಈ ಯೋಜನೆಗೆ ಅನುಮತಿ ಸಿಕ್ಕಿತ್ತು. ಎನ್‌ಎಚ್-119 ಮತ್ತು ಎನ್‌ಎಚ್-74ನಲ್ಲಿವಾಹನ ದಟ್ಟಣೆ ಕಡಿಮೆ ಮಾಡಲು ಈ ಸೇತುವೆ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಇದು ಮುಜಾಫ್ಫರ್ ನಗರಕ್ಕೆ ಬೈಪಾಸ್ ಆಗಿಯೂ ಇರಬೇಕಿತ್ತು.
ಬೆಂಗಳೂರು ಮೂಲದ ಯುವ ಚಿತ್ರ ಕಲಾವಿದನ ಪ್ರತಿಭೆಗೆ ಪ್ರಧಾನಿ ಮೋದಿ ಪ್ರಶಂಸೆ
ಸೇತುವೆಯ ಒಂದು ಬದಿಯನ್ನು ಸರಕಾರಿ ಭೂಮಿ ಎಂದು ತಪ್ಪಾಗಿ ಗುರುತು ಮಾಡಿದ್ದೇ ಈ ಸೇತುವೆ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವಾಯ್ತು. ಭೂ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿ ಮುಗಿಯುವ ಹೊತ್ತಿಗೆ ಸೇತುವೆಯ ನಿರ್ಮಾಣ ವೆಚ್ಚದ ಹೊರೆ ಹೆಚ್ಚಾಗಿ 55 ಕೋಟಿ ರೂ. ಆಗಿತ್ತು. ಹಾಗಾಗಿ ಪರಿಷ್ಕೃತ ಯೋಜನೆ ರೂಪಿಸಿ, ಸರಕಾರದ ಒಪ್ಪಿಗೆಗಾಗಿ ಲೋಕೋಪಯೋಗಿ ಇಲಾಖೆ ಕಾದುಕುಳಿತಿದೆ.