ದೇಶದ ಅತಿ ದೊಡ್ಡ ಹಾಗೂ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹಿಂದ್ರಾ ಟ್ವಿಟರ್ ಮೂಲಕ ಬಹಳ ಒಳ್ಳೆಯ ಸಂದೇಶಗಳನ್ನು ಹಂಚಿಕೊಂಡು ನೆಟ್ಟಿಗರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ.
ತಮ್ಮ ಹಳೆಯ ಚಿತ್ರವೊಂದನ್ನು ಹಂಚಿಕೊಂಡ ಆನಂದ್ ಮಹಿಂದ್ರ, ತಮ್ಮ ಬಾಲ್ಯದ ದಿನಗಳ ಆಸೆಗಳ ಕುರಿತಾಗಿ ಮಾತನಾಡಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬರೆದಿರುವ ಆನಂದ್, ಶಾಲಾ-ಕಾಲೇಜಿನ ದಿನಗಳಲ್ಲಿ ತಮಗೆ ಸಿನೆಮಾ ನಿರ್ಮಾಪಕರಾಗಬೇಕೆಂಬ ಆಸೆ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ.
ಒಮಿಕ್ರಾನ್ ಭೀತಿ, ಐದು ಜಿಲ್ಲೆಗಳಲ್ಲಿ ಕಠಿಣ ನಿಯಮ ಹೇರಿದ ಹರಿಯಾಣ ಸರ್ಕಾರ
“ಈ ಪ್ರಶ್ನೆಗೆ ಉತ್ತರಿಸುವುದು ಸುಲಭ. ನನಗೆ ಚಿತ್ರ ನಿರ್ಮಾಪಕನಾಗುವ ಆಸೆ ಇತ್ತು ಹಾಗೂ ಕಾಲೇಜಿನಲ್ಲಿ ಚಿತ್ರಗಳ ಬಗ್ಗೆ ಓದಿದ್ದೆ. ನನ್ನ ಥಿಸಿಸ್ ನಾನು 77ರ ಕುಂಭ ಮೇಳದಲ್ಲಿ ಮಾಡಿದ ಚಿತ್ರವೇ ಆಗಿತ್ತು. ಆದರೆ ಈ ಚಿತ್ರವು ಇಂದೋರ್ ಬಳಿಯ ಗ್ರಾಮವೊಂದರಲ್ಲಿ ಡಾಕ್ಯುಮೆಂಟರಿ ಚಿತ್ರೀಕರಿಸುತ್ತಿದ್ದ ವೇಳೆ ಸೆರೆ ಹಿಡಿದಿದ್ದಾಗಿದೆ. ನಾನು ಹಿಡಿದಿರುವ 16ಎಂಎಂ ಕ್ಯಾಮೆರಾ ಯಾವುದೆಂದು ಗೆಸ್ ಮಾಡಬಲ್ಲಷ್ಟು ವಯಸ್ಸಾದ ಮಂದಿ ನಿಮ್ಮಲ್ಲಿದ್ದೀರಾ?” ಎಂದು ಟ್ವೀಟ್ ಮಾಡಿದ್ದಾರೆ ಮಹಿಂದ್ರಾ.
ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಚಿತ್ರೋದ್ಯಮನ ನಷ್ಟವು ಆಟೋಮೊಟಿವ್ ಉದ್ಯಮದ ಗಳಿಕೆಯಾಗಿದೆ” ಎಂದಿದ್ದಾರೆ.