ನೀವು ವಾರದಲ್ಲಿ ಮೂರೂವರೆ ದಿನ ಮಾತ್ರ ಕೆಲಸ ಮಾಡಬೇಕಾದ ಭವಿಷ್ಯವನ್ನು ಕಲ್ಪಿಸಿಕೊಳ್ಳಿ – ಕೃತಕ ಬುದ್ಧಿಮತ್ತೆ (AI) ಆಗಮನದಿಂದ ಇದು ಸಾಧ್ಯವಾಗಲಿದೆ ಎಂದು ಜೆಪಿ ಮೋರ್ಗಾನ್ ಚೇಸ್ ಸಿಇಒ ಜೇಮೀ ಡಿಮನ್ ಭವಿಷ್ಯ ನುಡಿದಿದ್ದಾರೆ.
ಜೇಮೀ ಡಿಮನ್ ಪ್ರಕಾರ ಉದ್ಯೋಗಿಗಳ ಮೇಲೆ AI ಪ್ರಭಾವ ಬೀರಲಿದ್ದು, ಶ್ರದ್ಧೆ, ಸನ್ನದ್ಧತೆ ಮತ್ತು ಕಛೇರಿ ಹಾಜರಾತಿಯಂತಹ ಸಾಂಪ್ರದಾಯಿಕ ಕಾರ್ಯಸ್ಥಳದ ಮೌಲ್ಯಗಳನ್ನು ಪ್ರತಿಪಾದಿಸಿದರೂ, AI ಅನುಷ್ಠಾನದಿಂದಾಗಿ ಭವಿಷ್ಯದ ಉದ್ಯೋಗಿಗಳು ಕೆಲಸದ ಸಮಯವನ್ನು ಕಡಿಮೆಗೊಳಿಸುವುದರಿಂದ ಪ್ರಯೋಜನ ಪಡೆಯಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಾಪಕವಾದ ಉದ್ಯೋಗ ನಷ್ಟಗಳ ಮುನ್ನೋಟಗಳಿಗೆ ವಿರುದ್ಧವಾಗಿ, ತಂತ್ರಜ್ಞಾನವು ವ್ಯಾಪಾರ ಕಾರ್ಯಾಚರಣೆಗಳನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗಿಗಳ ಕೆಲಸ-ಜೀವನದ ಸಮತೋಲನವನ್ನು ಸುಧಾರಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಭವಿಷ್ಯದಲ್ಲಿ ಉದ್ಯೋಗಿಗಳು ವಾರಕ್ಕೆ ಮೂರೂವರೆ ದಿನ ಮಾತ್ರ ಕೆಲಸ ಮಾಡಬೇಕಾಗಿ ಬರಬಹುದು, ಏಕೆಂದರೆ AI ಪ್ರಸ್ತುತ ಕಾರ್ಯಗಳಲ್ಲಿ 60% ರಿಂದ 70% ರಷ್ಟು ಸ್ವಯಂಚಾಲಿತಗೊಳಿಸಬಹುದು. ಕಡಿಮೆ ಕೆಲಸದ ವಾರಗಳೊಂದಿಗೆ, ಭವಿಷ್ಯದ ಉದ್ಯೋಗಿಗಳು ಹೆಚ್ಚಿದ ದೀರ್ಘಾಯುಷ್ಯವನ್ನು ಆನಂದಿಸಬಹುದು ಎಂದು ಅವರು ಹೇಳಿದ್ದಾರೆ.