ನಮ್ಮ ಜೀವನದ ಮೇಲೆ ಗಾಢವಾಗಿ ಪ್ರಭಾವ ಬೀರುವ ಅಪರಿಚಿತರನ್ನು ನಾವು ಆಗಾಗ್ಗೆ ಭೇಟಿಯಾಗುತ್ತೇವೆ. ಬಿಡುವಿಲ್ಲದ ಬೆಂಗಳೂರು ಟ್ರಾಫಿಕ್‌ನ ಕ್ಯಾಬ್ ರೈಡ್‌ನಲ್ಲಿ ತನ್ನ ಜೀವನದ ಅತ್ಯಂತ ಸ್ಫೂರ್ತಿದಾಯಕ ಅನುಭವ ಪಡೆದ ಟ್ವಿಟರ್ ಬಳಕೆದಾರ ಸುಮಿತ್ ಮೇಘಾನಿಯೊಂದಿಗೆ ಇದು ಸಂಭವಿಸಿದೆ.
ತಮ್ಮ ಕ್ಯಾಬ್ ಡ್ರೈವರ್‌ನೊಂದಿಗೆ ಮಾತನಾಡಲು ಆರಂಭಿಸಿದಾಗ ನಾನು ಅತ್ಯಂತ ಸ್ಫೂರ್ತಿದಾಯಕ ಅನುಭವ ಪಡೆದೆ ಎಂದಿದ್ದಾರೆ. ಕ್ಯಾಬ್ ಡ್ರೈವರ್ ಕುಟುಂಬದ ಏಕೈಕ ಆಧಾರವಾಗಿದ್ದಾರೆ, 17 ವರ್ಷಗಳಿಂದ ಡ್ರೈವಿಂಗ್ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು ಅವರ ಕಥೆ ಹೇಳಿದ್ದಾರೆ.
ಕಷ್ಟಪಟ್ಟು ಕೆಲಸ ಮಾಡುವ ಚಾಲಕ 17 ವರ್ಷಗಳಿಂದ ತಮ್ಮ ಕುಟುಂಬವನ್ನು ಸಲಹುತ್ತಿದ್ದಾರೆ. ರಾತ್ರಿಯಿಡೀ ಅವರು ದುಡಿಯುತ್ತಾರೆ. ಅವರ ಕಥೆ ನನಗೆ ಸ್ಫೂರ್ತಿ ಎಂದಿದ್ದಾರೆ. ಇದೇ ವೇಳೆ ಚಾಲಕನ ಒಂದು ಅನುಭವವನ್ನು ಅವರು ಶೇರ್ ಮಾಡಿದ್ದಾರೆ.
ಒಮ್ಮೆ ರಾತ್ರಿಯ ವೇಳೆ ಮನೆಗೆ ಹೋಗುತ್ತಿರುವಾಗ, ಒಬ್ಬ ವ್ಯಕ್ತಿ ತುರ್ತು ಪರಿಸ್ಥಿತಿ ಇದೆ ಎಂದು ಬೇಡಿಕೊಂಡರು. ನಂತರ ಅವರ ಮನೆಗೆ ಹೋದಾಗ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು. ಕೂಡಲೇ ತಡ ಮಾಡದೇ ಕ್ಯಾಬ್ ಚಾಲಕ ಅವರನ್ನು ಒಂದು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ವೈದ್ಯರು ಕರ್ತವ್ಯದಲ್ಲಿ ಇಲ್ಲ ಎನ್ನುವುದನ್ನು ತಿಳಿದು ತಡಮಾಡದೇ ಬೇಗನೆ ಮತ್ತೊಂದು ಆಸ್ಪತ್ರೆಗೆ ಧಾವಿಸಿದರು ಮತ್ತು ಮಗುವಿನ ಸುಸೂತ್ರ ಹೆರಿಗೆಗೆ ನೆರವಾದರು ಎಂದು ಬರೆದಿದ್ದಾರೆ. ಕ್ಯಾಬ್ ಚಾಲಕನ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.