
ಈಗ ಇಂಥದ್ದೇ ಒಂದು ಸುದ್ದಿ ಭಾರಿ ವೈರಲ್ ಆಗಿದೆ. ಅದು ಬೆಂಗಳೂರಿನ ಏರ್ಬಿಎನ್ಬಿಯದ್ದು. ಬೆಂಗಳೂರಿನಲ್ಲಿ ಮಳಿಗೆ ಹಾಕಿರುವ ಏರ್‌ಬಿಎನ್‌ಬಿ ತನ್ನ ಪ್ರತಿಯೊಂದು ವಸ್ತುಗಳಿಗೂ ಕ್ಯೂಆರ್ ಕೋಡ್ ಹಾಕಿದೆ. ಅದರ ಮೇಲೆ ಸ್ಕ್ಯಾನ್ ಮಾಡಿ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬಹುದು.
ಅದು ಎಷ್ಟರಮಟ್ಟಿಗೆ ಎಂದರೆ ಒಂದು ರೂಪಾಯಿಯ ಸಾಮಗ್ರಿಯಿಂದ ಹಿಡಿದು, ಒಂದೇ ಒಂದು ಬಿಸ್ಕೆಟ್ ಬೇಕಾದರೂ ಇಲ್ಲಿ ಖರೀದಿ ಮಾಡಬಹುದು. ಆದರೆ ಎಲ್ಲದರ ಮೇಲೂ ಕ್ಯೂಆರ್ ಕೋಡ್ ಹಾಕಲಾಗಿದೆ.
ಇಂಥದ್ದೊಂದು ವಿಶೇಷತೆಯ ಕುರಿತು ಟ್ವಿಟರ್ ಬಳಕೆದಾರ ದೀಪಕ್ ಗೋಪಾಲಕೃಷ್ಣನ್ ಪೋಸ್ಟ್ ಮಾಡಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ನೆಟ್ಟಿಗರು ಮನಸೋತರೂ, ಇಲ್ಲಿ ಕೂಡ ಒಂದು ರೂಪಾಯಿ ಶ್ಯಾಂಪೂಗೆ, ಎರಡು ರೂಪಾಯಿ ವಿಧಿಸಿರುವುದನ್ನು ಕಂಡು ಕಿಡಿ ಕಾರಿದ್ದಾರೆ. ಪೋಸ್ಟ್ 500 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಅನೇಕ ಕಾಮೆಂಟ್ ಬಂದಿವೆ.