ಭಾರತೀಯ ಜನರು ನಿತ್ಯದ ಅಡುಗೆಯಲ್ಲಿ ಸಾಮಾನ್ಯವಾಗಿ ಬೆಳ್ಳುಳ್ಳಿಯನ್ನ ಬಳಕೆ ಮಾಡ್ತಾರೆ. ಆದರೆ ಎಷ್ಟೋ ಜನರಿಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸೋದ್ರಿಂದ ಏನೇನು ಲಾಭವಿದೆ ಅನ್ನೋದ್ರ ಬಗ್ಗೆ ಮಾಹಿತಿಯೇ ಇಲ್ಲ.
ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದ್ರೆ ಆಗುವ ಮ್ಯಾಜಿಕ್ ಬಗ್ಗೆ ತಿಳಿದುಕೊಳ್ಳೋಣ.
ನಿಮಗೆ ಏನಾದ್ರೂ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದಿದ್ದು ಹೌದಾದಲ್ಲಿ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಬೆಳ್ಳುಳ್ಳಿ ರಕ್ತ ಸಂಚಾರವನ್ನ ಸರಾಗ ಮಾಡುವಲ್ಲಿ ತುಂಬಾನೇ ಸಹಕಾರಿ.
ಬೆಳ್ಳುಳ್ಳಿ ಉದರದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೊಟ್ಟೆ ಸಂಬಂಧಿ ಕಾಯಿಲೆಗಳಾದ ಮಲಬದ್ಧತೆ, ಡೈರಿಯಾದಂತಹ ಸಮಸ್ಯೆಗಳಿಗಂತೂ ಬೆಳ್ಳುಳ್ಳಿ ರಾಮಬಾಣವೇ ಸರಿ. ಇದಕ್ಕಾಗಿ ನೀವು ನೀರನ್ನ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನ ಹಾಕಿ. ಈ ನೀರನ್ನ ನಿತ್ಯ ಖಾಲಿ ಹೊಟ್ಟೇಲಿ ಸೇವಿಸಿದ್ರೆ ನಿಮಗೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗೋದು ಗ್ಯಾರಂಟಿ.
ಹೃದಯ ಸಂಬಂಧಿ ಕಾಯಿಲೆಗಳಿಗೂ ಬೆಳ್ಳುಳ್ಳಿ ತುಂಬಾನೇ ಪ್ರಯೋಜಕ. ನೀವು ಈ ಅಭ್ಯಾಸ ರೂಢಿ ಮಾಡಿಕೊಂಡರೆ ನಿಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟೋದಿಲ್ಲ. ಇದರಿಂದ ನಿಮಗೆ ಹೃದಯಾಘಾತದ ಸಮಸ್ಯೆನೂ ಇರೋದಿಲ್ಲ.