ಬಣ್ಣ ಒಂದು ವಸ್ತುವಿನ ಸೌಂದರ್ಯವನ್ನು ಮಾತ್ರ ಇಮ್ಮಡಿಗೊಳಿಸುವುದಿಲ್ಲ. ನಮ್ಮ ಜೀವನದ ಮೇಲೆಯೂ ಪ್ರಭಾವ ಬೀರುತ್ತದೆ. ಸಿಂಧೂರ ಕೇವಲ ಕೆಂಪು ಬಣ್ಣವಲ್ಲ. ಇದು ನಮ್ಮ ಜೀವನದ ಅನೇಕ ರಹಸ್ಯಗಳನ್ನು ತೆರೆದಿಡುತ್ತದೆ.
ಶುಭ-ಅಶುಭದ ಸಂಕೇತ ಕೂಡ ಹೌದು. ಎಲ್ಲ ರೀತಿಯ ಪೂಜೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.
ಆದಿ ಶಕ್ತಿಯ ಪೂಜೆಯಲ್ಲಿ ಇದನ್ನು ಬಳಸಲಾಗುತ್ತದೆ. ಸಿಂಧೂರವಿಲ್ಲದ ಪೂಜೆ ಪೂರ್ಣಗೊಳ್ಳುವುದಿಲ್ಲ. ಈ ಸಿಂಧೂರವನ್ನು ಮನೆಯ ಬಾಗಿಲಿಗೆ ಹಚ್ಚಲಾಗುತ್ತದೆ. ವಾಸ್ತು ಪ್ರಕಾರ ಇದಕ್ಕೊಂದು ಪ್ರತ್ಯೇಕ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲಿಗೆ ಸಿಂಧೂರವನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ದರೆ ಅದ್ರ ಶಕ್ತಿಯನ್ನೂ ಈ ಸಿಂಧೂರ ಕಡಿಮೆ ಮಾಡುತ್ತದೆ.
ಮನೆಯ ಬಾಗಿಲಿಗೆ ಸಿಂಧೂರ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯ ಮೇಲೆ ಸದಾ ಲಕ್ಷ್ಮಿ ಕೃಪೆ ಇರುತ್ತದೆ.
ಇದ್ರ ಜೊತೆಗೆ ಸಾಸಿವೆ ಎಣ್ಣೆಯನ್ನು ಉಪಯೋಗಿಸಿದ್ರೆ ಮನೆಯ ಪ್ರತಿಯೊಬ್ಬ ಸದಸ್ಯ ಕೆಟ್ಟ ದೃಷ್ಟಿಯಿಂದ ಬಚಾವ್ ಆಗ್ತಾನೆ.