ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾದದ್ದು, ದಿನನಿತ್ಯ 3ರಿಂದ 4ಲೀಟರ್ ಕುಡಿಯಲೇಬೇಕು ಎಂದು ಹೇಳಿರುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ನೀರು ಕಡಿಮೆ ಕುಡಿಯುವುದರಿಂದ ಸಂಧಿವಾತ, ಗಂಟು ಸಮಸ್ಯೆಗಳು ನಿಮ್ಮನ್ನು ಬಿಡದೆ ಕಾಡುತ್ತವೆ.
ಕುಳಿತೇ ನೀರು ಕುಡಿಯಬೇಕು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೊಂದು ಕಾರಣವಿದೆ. ಕುಳಿತು ನೀರು ಕುಡಿದಾಗ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗಿ ದೇಹಕ್ಕೆ ಬೇಕಾದ ಮಿನರಲ್ ಗಳು ದೇಹಕ್ಕೆ ಲಭ್ಯವಾಗುತ್ತದೆ.
ನಿಂತು ನೀರು ಕುಡಿದರೆ ಅದು ನೇರವಾಗಿ ಕೆಳಗೆ ಇಳಿಯುತ್ತದೆ. ಅಗತ್ಯವಾಗಿ ತಲುಪಬೇಕಿದ್ದ ಜಾಗಕ್ಕೆ ಸೇರುವುದಿಲ್ಲ. ಕುಳಿತು ಕುಡಿದರೆ ಎಲ್ಲಾ ಭಾಗಕ್ಕೂ ಹರಿದು ಹೆಚ್ಚಾದ ಅಂಶವನ್ನು ಹೊರಹಾಕುತ್ತದೆ.
ದೇಹದಿಂದ ನೀರು ನೇರವಾಗಿ ಹರಿಯುವುದು ಕೆಲವೊಮ್ಮೆ ಮೂಳೆ ಮತ್ತು ಕೀಲುಗಳ ನೋವಿಗೆ ಕಾರಣವಾಗಬಹುದು. ಹೀಗಾಗಿ ನೀರನ್ನು ಹೇಗೆ ಕುಡಿಯುತ್ತೀರಿ ಎಂಬುದೂ ಮುಖ್ಯ ವಿಷಯವಾಗುತ್ತದೆ. ಹೃದಯ ಮತ್ತು ಶ್ವಾಸಕೋಶಗಳ ಆರೋಗ್ಯ ದೀರ್ಘಕಾಲ ಕಾಪಾಡಿಕೊಳ್ಳಬೇಕು ಎಂದಿದ್ದರೆ ಕುಳಿತೇ ನೀರು ಕುಡಿಯಿರಿ.