ಬೇಸಿಗೆಯ ಬೇಗೆ ಜನರಿಗೆ ಬಲು ಕಿರಿಕಿರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾತಮಾರನ್ ಬ್ರೀವಿಂಗ್ ಕೋ ಬಿಸಿಲಿನ ಝಳದ ವಿರುದ್ಧ ಹೋರಾಡಲು ’ಚಿಲ್ಲಿಂಗ್’ ಐಡಿಯಾವೊಂದನ್ನು ಹೊರತಂದಿದೆ.
ಪಾಂಡಿಚೆರಿಯ ಮೊದಲ ಮೈಕ್ರೋಬ್ರಿವರಿ ಸ್ಥಾಪಿಸಿರುವ ಕ್ಯಾತಮಾರನ್, ಪಾಂಡಿಚೆರಿಯಿಂದ ಚೆನ್ನೈ ನಡುವೆ ’ಬಿಯರ್ ಬಸ್’ ಒಂದನ್ನು ಆರಂಭಿಸಲಿದೆ.
ಏಪ್ರಿಲ್ 22ರಿಂದ ಆರಂಭಗೊಳ್ಳುವ ಈ ಸೇವೆಯಲ್ಲಿ ಚೆನ್ನೈ-ಪುದುಚೆರಿ-ಚೆನ್ನೈ ನಡುವೆ ನೀವು ಪ್ರಯಾಣಿಸಬಹುದಾಗಿದೆ. ಈ ಟ್ರಿಪ್‌ನಲ್ಲಿ ಮೂರು ಕೋರ್ಸ್ ಊಟ, ಅನಿಯಮಿತ ಕ್ರಾಫ್ಟ್ ಬಿಯರ್ ಹಾಗೂ ಪಾಂಡಿಚೇರಿಯಲ್ಲಿರುವ ಮೈಕ್ರೋಬ್ರಿವರಿಗೆ ಭೇಟಿ ಕೊಡಬಹುದಾಗಿದೆ. ಈ ಪ್ರಯಾಣದ ಟಿಕೆಟ್ ದರ 3,000 ರೂ. ಎಂದು ನಿಗದಿಪಡಿಸಲಾಗಿದೆ.
ಕಾನೂನುಗಳ ಕಾರಣದಿಂದಾಗಿ ಬಿಯರ್ ಅನ್ನು ಬಸ್‌ನಲ್ಲಿ ಸೇವಿಸುವಂತಿಲ್ಲ. ಆದರೆ ಸರ್ಕಾರವು ಇದಕ್ಕೆಂದು ಪುದುವೈನಲ್ಲಿ ನಿಯೋಜಿಸಿರುವ ಪ್ರದೇಶದಲ್ಲಿ ಕುಳಿತು ಬಿಯರ್ ಸವಿಯಬಹುದಾಗಿದೆ.
ಕ್ರಾಫ್ಟ್ ಬಿಯರ್‌ನ ಎಂಟು ವಿಧಗಳನ್ನು ಪ್ರಯಾಣಿಕರು ಸವಿಯಬಹುದಾಗಿದೆ ಎಂದು ಕಂಪನಿಯ ನಿರ್ದೇಶಕ ರಂಗರಾಜು ನಾರಾಯಣಸ್ವಾಮಿ ತಿಳಿಸಿದ್ದಾರೆ.
ಹವಾ ನಿಯಂತ್ರಿರ ವೋಲ್ವೋ ಬಸ್‌ನಲ್ಲಿ 40 ಪ್ರಯಾಣಿಕರು ಸಂಚರಿಸಬಹುದಾಗಿದೆ. ಸದ್ಯದ ಮಟ್ಟಿಗೆ ಕನಿಷ್ಠ 10 ಮಂದಿ ಇರುವ ಗ್ರೂಪ್ ಬುಕಿಂಗ್‌ಗಳನ್ನು ಮಾತ್ರವೇ ಮಾಡಿಕೊಳ್ಳಲಾಗುತ್ತಿದೆ. ಹುಟ್ಟುಹಬ್ಬಗಳು ಹಾಗೂ ಬ್ಯಾಚುಲರ್‌ಗಳ ಪಾರ್ಟಿಗಳನ್ನು ಬಸ್ ಒಳಗೆ ಇಟ್ಟುಕೊಳ್ಳಲು ವಿಚಾರಣೆಗಳು ಜೋರಾಗಿ ನಡೆಯುತ್ತಿವೆ ಎಂದು ರಂಗರಾಜು ತಿಳಿಸಿದ್ದಾರೆ.
12 ಗಂಟೆಗಳ ಈ ಪ್ರಯಾಣಕ್ಕೆ ವಯಸ್ಕರಿಗೆ 3,000 ರೂ.ಗಳು, 12.-18 ವರ್ಷ ವಯಸ್ಸಿನವರಿಗೆ 2,000 ರೂ.ಗಳು ಹಾಗೂ ಮಕ್ಕಳಿಗೆ 1,500 ರೂ.ಗಳ ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ 6385596777ಗೆ ಕರೆ ಮಾಡಬಹುದು.