ದೇಶದ ರಾಜಧಾನಿ ದೆಹಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿಗರು ನೋಡುವಂತಹ ಅನೇಕ ಸ್ಥಳಗಳು ದೆಹಲಿಯಲ್ಲಿವೆ. ಅಷ್ಟೇ ಅಲ್ಲ, ಅಲ್ಲಿನ ದೇವಸ್ಥಾನಗಳು ಕೂಡ ಸುಂದರವಾಗಿವೆ. ನೀವೂ ಪ್ರವಾಸಕ್ಕೆಂದು ದೆಹಲಿಗೆ ಹೋದ್ರೆ ಮರೆಯದೆ ಈ ಕೆಳಗಿನ ದೇವಸ್ಥಾನಗಳನ್ನು ನೋಡಿ ಬನ್ನಿ.
ಲಕ್ಷ್ಮಿ ನಾರಾಯಣ ಮಂದಿರ : ಭಾರತ ಹಾಗೂ ದೆಹಲಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಲಕ್ಷ್ಮಿ ನಾರಾಯಣ ಮಂದಿರವೂ ಒಂದು. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬರ್ತಾರೆ. ಬೇಡಿ ಬಂದ ಭಕ್ತರ ಆಸೆಗಳು ಇಲ್ಲಿ ಈಡೇರಲಿವೆ.
ಕಲ್ಕಾಜಿ ಮಂದಿರ : ದೆಹಲಿಯಲ್ಲಿರುವ ಈ ಕಲ್ಕಾಜಿ ಮಂದಿರವನ್ನು 18ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ದಕ್ಷಿಣ ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ದೇವಸ್ಥಾನವಿದೆ. ಈ ದೇವಾಲಯದಲ್ಲಿ ಕಾಳಿಮಾತೆ ನೆಲೆಸಿದ್ದಾಳೆ. ನವರಾತ್ರಿ ವೇಳೆ ವಿಶೇಷ ಪೂಜೆ ನಡೆಯುತ್ತದೆ.
ಯೋಗ್ಮಾಯ ದೇವಸ್ಥಾನ : ದೆಹಲಿಯ ಕುತುಬ್ ಮಿನಾರ್ ಸಮೀಪದಲ್ಲಿಯೇ ಯೋಗ್ಮಾಯ ದೇವಸ್ಥಾನವಿದೆ. ಇದು ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು. ಈ ದೇವಾಲಯವನ್ನು ಮಹಾಭಾರತ ಯುದ್ಧ ಮುಗಿದ ನಂತ್ರ ಪಾಂಡವರು ನಿರ್ಮಿಸಿದರು ಎನ್ನಲಾಗುತ್ತದೆ.
ಛತರ್ಪುರ್ ದೇವಾಲಯ : ಛತರ್ಪುರ್ ದೇವಾಲಯ ದೆಹಲಿಯ ಪ್ರಸಿದ್ಧ ಮತ್ತು ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಗುರಗಾಂವ್-ಮೆಹ್ರೌಲಿ ರಸ್ತೆಯ ಛತರ್ಪುರ್ ಬಳಿ ಈ ದೇವಸ್ಥಾನವಿದೆ. 1974 ರಲ್ಲಿ ಕರ್ನಾಟಕ ಸಂತ ಬಾಬಾ ನಾಗ್ಪಾಲ್ ಸ್ಥಾಪಿಸಿದರು ಎನ್ನಲಾಗಿದೆ.