ಬಹಳಷ್ಟು ಉದ್ಯೋಗಿಗಳು ತಮ್ಮ ನೌಕರಿಯಲ್ಲಿ ವರ್ಷಾನುವರ್ಷ ಕಳೆದಂತೆ ಬಯಸುವುದು ತಮ್ಮ ಕೆಲಸದ ದಕ್ಷತೆ, ಶ್ರಮಕ್ಕೆ ತಕ್ಕಂತಹ ವೇತನದಲ್ಲಿ ಹೆಚ್ಚಳ. ಇಲ್ಲವೇ ಒಂದು ಪ್ರಶಂಸಾ ಪತ್ರ, ಕಂಪನಿ ಕಡೆಯಿಂದ ಬೋನಸ್, ಕಂಪನಿ ಕಡೆಯಿಂದ ಗೌರವ ಧನದಂತಹ ಬೆನ್ನುತಟ್ಟಿ ಹುರಿದುಂಬಿಸುವಿಕೆಯನ್ನು ಮಾತ್ರ.
ಆದರೆ, ಮನೆಕೆಲಸ, ಉದ್ಯಾನದ ಕೆಲಸ ಮಾಡುವವರು ಪಾಪ ಇದನ್ನು ಕೂಡ ಬಯಸಲ್ಲ. ಹಬ್ಬಕ್ಕೇನಾದರೂ ಮಾಲೀಕರು 500 ರೂ. ಖರ್ಚಿಗೆ ಕೊಟ್ಟರೆ ಸಾಕು ಎಂದು ಎದುರು ನೋಡುತ್ತಿರುತ್ತಾರೆ.
ಈ ರೀತಿ ಎದುರು ನೋಡುತ್ತಿದ್ದವರಿಗೆ ಸಿಕ್ಕಿದ್ದು ಸಾವಿರಾರು ರೂಪಾಯಿ ಬೆಲೆ ಬಾಳುವ ಷೇರುಗಳು…!
14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ಕಿರಾತಕರು…..!
ಹೌದು, ಐಡಿಎಫ್‌ಸಿ ಖಾಸಗಿ ಬ್ಯಾಂಕ್ ಎಂಡಿ ಹಾಗೂ ಸಿಇಒ ವಿ. ವೈದ್ಯನಾಥನ್ ಅವರು ತಮ್ಮ ಬಳಿಯಿದ್ದ ಕಂಪನಿಯ 9 ಲಕ್ಷ ಷೇರುಗಳನ್ನು ಮನೆ ಕೆಲಸದಾತ, ಡ್ರೈವರ್, ಫಿಟ್ನೆಸ್ ತರಬೇತುದಾರ ಸೇರಿದಂತೆ ನಿತ್ಯ ತಮಗೆ ನೆರವಾಗುವವರಿಗೆ ಐದು ಭಾಗಗಳಾಗಿ ಹಂಚಿದ್ದಾರಂತೆ. ಇದರ ಒಟ್ಟಾರೆ ಮೌಲ್ಯ 3.95 ಕೋಟಿ ರೂ. ಆಗಿದೆ.
ಇದಕ್ಕೂ ಮುನ್ನ 2021ರ ಸೆಪ್ಟೆಂಬರ್‌ನಲ್ಲಿ ವೈದ್ಯನಾಥನ್ ಅವರು 30 ಲಕ್ಷ ರೂ. ಮೌಲ್ಯದ ಇಕ್ವಿಟಿ ಷೇರುಗಳನ್ನು ತಮ್ಮ ಮಾಜಿ ಶಾಲಾ ಶಿಕ್ಷಕರೊಬ್ಬರಿಗೆ ಗುರುದಕ್ಷಿಣೆ ರೂಪದಲ್ಲಿ ನೀಡಿ ಗಮನ ಸೆಳೆದಿದ್ದರು.
ಈ ಬಾರಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕಡೆಯಿಂದ ಉಡುಗೊರೆ ಹಾಗೂ ಸಾಮಾಜಿಕ ಕಾರ್ಯಗಳ ರೂಪದಲ್ಲಿ11 ಲಕ್ಷ ಇಕ್ವಿಟಿ ಷೇರುಗಳನ್ನು ಹಂಚಲಾಗಿದೆಯಂತೆ. ಇವುಗಳನ್ನು ಪಡೆದವರಿಂದ ನೇರ ಅಥವಾ ಪರೋಕ್ಷ ಲಾಭವನ್ನು ಬ್ಯಾಂಕ್ ಅಪೇಕ್ಷಿಸಿಲ್ಲ.