ದೇಶದ ಸಾರ್ವಜನಿಕ ಸ್ವಾಮ್ಯದ ಅತ್ಯಂತ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಅಲಹಾಬಾದ್ ಬ್ಯಾಂಕ್ ಫೆಬ್ರವರಿ 15ರಿಂದ ಇಂಡಿಯನ್ ಬ್ಯಾಂಕ್ ಜೊತೆಗೆ ವಿಲೀನಗೊಂಡಿರುವ ಸಂಬಂಧ ಸಾಫ್ಟ್‌ವೇರ್ ವಲಸೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ.
ಇದರೊಂದಿಗೆ ಅಲಹಾಬಾದ್ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್, ಚೆಕ್ ಬುಕ್ ಹಾಗೂ ಪಾಸ್‌ಬುಕ್‌ಗಳ ಬದಲಾವಣೆಯನ್ನೂ ಮಾಡಲಿರುವ ಕಾರಣ ಮೇಲ್ಕಂಡ ಬ್ಯಾಂಕಿನಲ್ಲಿ ಖಾತೆ ಇರುವ ಮಂದಿ ಅಕ್ಟೋಬರ್ 1, 2021ರೊಳಗೆ ತಮ್ಮ ಹೊಸ ಚೆಕ್ ಬುಕ್‌ಗಳನ್ನು ಪಡೆಯಬೇಕಾಗುತ್ತದೆ.
ವಿಲೀನಗೊಂಡ ಆರು ತಿಂಗಳವರೆಗೂ ಅಥವಾ ಚೆಕ್‌ಬುಕ್‌ನ ಹಾಳೆಗಳು ಖಾಲಿ ಆಗುವವರೆಗೂ ಅಲಹಾಬಾದ್ ಬ್ಯಾಂಕ್ ಖಾತಾದಾರರಿಗೆ ಚಾಲ್ತಿಯಲ್ಲಿದ್ದ ಹಳೆಯ ಚೆಕ್‌ಬುಕ್‌ಗಳನ್ನೇ ಬಳಸಲು ಅವಕಾಶ ಕೊಡಲಾಗಿತ್ತು.
ʼಮಳೆಗಾಲʼದಲ್ಲಿ ಪ್ರವಾಸ ಹೋಗಲು ಇವು ಬೆಸ್ಟ್ ಪ್ಲೇಸ್
ಈ ಸಂಬಂಧ ಹೆಚ್ಚಿನ ವಿವರಗಳಿಗಾಗಿ ಗ್ರಾಹಕ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ 1800-425-0000ಗೆ ಕರೆ ಮಾಡಬಹುದಾಗಿದೆ. ನೆಟ್ ಬ್ಯಾಂಕಿಂಗ್‌ಗಾಗಿ http://indianbank.net.in ಪೋರ್ಟಲ್ ಬಳಸಬಹುದಾಗಿದೆ. ಹೊಸ ನಿಯಮಗಳ ಅಷ್ಟೂ ವಿವರಗಳನ್ನು ಈ ಜಾಲತಾಣದಲ್ಲಿ ಪಡೆಯಬಹುದಾಗಿದೆ.
2020ರ ಕೇಂದ್ರ ಬಜೆಟ್ ವೇಳೆ ಘೋಷಿಸಲಾದಂತೆ ಸರ್ಕಾರಿ ಸ್ವಾಮ್ಯದ ಒಂಬತ್ತು ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಾಗಿ ವಿಲೀನಗೊಳಿಸಲಾಗಿದೆ.