ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ನೀವಾಗಿದ್ದಲ್ಲಿ ಈ ಮುಖ್ಯವಾದ ವಿಚಾರದ ಬಗ್ಗೆ ಗೊತ್ತಿರಲಿ. ಅಕ್ಟೋಬರ್ 1ರಿಂದ ಈ ಬ್ಯಾಂಕ್ ತನ್ನ ಎಟಿಎಂಗಳನ್ನು ಶಟ್ ಡೌನ್ ಮಾಡಲಿದೆ. ಈ ಬ್ಯಾಂಕಿನ ಎಟಿಎಂಗಳು ಮುಚ್ಚಿದರೂ ಸಹ ಕಾರ್ಡ್‌ಗಳನ್ನು ಬಳಸಿ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ವ್ಯವಹಾರ ಮಾಡಬಹುದಾಗಿದೆ.
ಸೂರ್ಯೋದಯ ಬ್ಯಾಂಕ್‌ನ ಎಂ.ಡಿ. ಆರ್ ಭಾಸ್ಕರ್ ಬಾಬು ಈ ಬಗ್ಗೆ ಮಾತನಾಡಿದ್ದು, ಬ್ಯಾಂಕಿನ ಎಟಿಎಂ ಅನ್ನು ಹೆಚ್ಚಿನ ಗ್ರಾಹಕರು ಬಳಸದೇ ಇರುವ ಕಾರಣದಿಂದ ಬ್ಯಾಂಕಿನ ಲಾಭದ ಅಂತರ ಕಡಿಮೆಯಾಗಿರುವ ಕಾರಣ ಆಂತರಿಕ ಸಭೆಯ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ.
ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ
ತನ್ನ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ಗಳನ್ನು ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಬಳಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ಬ್ಯಾಂಕ್‌ನ ಮ್ಯಾನೇಜ್ಮೆಂಟ್ ತಿಳಿಸಿದೆ. ಇದಕ್ಕಾಗಿ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾದ ಅಗತ್ಯವಿಲ್ಲ.
ಆನ್ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಅನ್ನು ಗ್ರಾಹಕರು ಬಳಸುವುದನ್ನು ಮುಂದುವರೆಸಬಹುದಾಗಿದೆ. ಇದರ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.