ಭುವನೇಶ್ವರ: ಸಾಂಕ್ರಾಮಿಕ ರೋಗ ಕೊರೋನಾ ಹಲವರ ಬಾಳು ಕಸಿದುಕೊಂಡಿದೆ. ಆದರೆ ಇಲ್ಲೊಬ್ಬ ತೆರೆಮರೆಯ ಪ್ರತಿಭೆ ಕೊರೋನಾ ಕಾರಣದಿಂದ ಬೆಳಕಿಗೆ ಬಂದಿದ್ದಾರೆ.
ಹೌದು, ಅನಿಲ್ ಗೋಚಿಕರ್ ಎಂಬುವವರು ಬಾಹುಬಲಿ ಹಾಗೂ ಪುರಿ ಜಗನ್ನಾಥ ದೇವರ ಬಾಡಿಗಾರ್ಡ್ ಎಂದು ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಇವರು ತಮ್ಮ ದೇಹದಾರ್ಡ್ಯ ಮುಖಾಂತರ ಎಲ್ಲರ ಗಮನಸೆಳೆದಿದ್ದಾರೆ.
ದೇವಾಲಯದ ರಥಯಾತ್ರೆ ವೇಳೆ ಅವರ ಕೆಲವೊಂದು ಫೋಟೋಗಳು ವೈರಲ್ ಆಗಿದ್ದು, ಸದ್ಯ ಇಂಟರ್ನೆಟ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಅನಿಲ್ ಒಂದು ಫೋಟೋದಲ್ಲಿ ರಥದ ಮೇಲೆ ನಿಂತಿದ್ದರೆ, ಇನ್ನೊಂದು ಭವ್ಯವಾದ ರಥ ಎಳೆಯುತ್ತಿರುವ ಫೋಟೋ ನೋಡಿದಂತಹ ಜನ ಬಾಹುಬಲಿ ಅಂತಾ ಕರೆದಿದ್ದಾರೆ.
ಅಂದಹಾಗೆ ಗೋಚಿಕರ್ ಅವರ ಕುಟುಂಬವು ತಲೆಮಾರುಗಳಿಂದ ಜಗನ್ನಾಥ ದೇವಾಲಯದ ಭದ್ರತಾ ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಷ ಕೊರೋನಾ ಕಾರಣದಿಂದ ಭಕ್ತರಿಗೆ ರಥಯಾತ್ರೆ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿರಲಿಲ್ಲ. ಸೇವಕರು ಮಾತ್ರ ರಥಗಳನ್ನು ಎಳೆದಿದ್ದಾರೆ. ಹೀಗಾಗಿ ಅನಿಲ್ ಗೋಚಿಕರ್ ಅವರ ಪ್ರಾಮುಖ್ಯತೆ ಹೆಚ್ಚಾಯಿತು. ಈ ಸುಂದರ ಕ್ಷಣವನ್ನು ತಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂಬುದಾಗಿ ಗೋಚಿಕರ್ ಹೇಳಿದ್ದಾರೆ.
ಪಪ್ಪಾಯ ಮರ ಸರಿಯಾಗಿ ಹಣ್ಣು ಬಿಡುತ್ತಿಲ್ಲವೆಂದರೆ ಈ ಟಿಪ್ಸ್ ಫಾಲೋ ಮಾಡಿ
ಕಳೆದ ವರ್ಷದ ರಥಯಾತ್ರೆ ವೇಳೆಯ ಅನುಭವವನ್ನು ಹಂಚಿಕೊಂಡ ಅವರು, ‘’ಕೊನೆಯ ಕ್ಷಣದವರೆಗೂ ಉತ್ಸವ ನಡೆಯಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಕೋವಿಡ್-19 ಬಗ್ಗೆ ಜನರಲ್ಲಿ ಭಯ ಉಂಟಾಗುತ್ತಿದ್ದಂತೆ, ರಥ ಎಳೆಯಲು ಸೀಮಿತ ಸಂಖ್ಯೆಯ ಸೇವಕರಷ್ಟೇ ಇದ್ದರು. ರಥ ಎಳೆಯಬೇಕೆಂದರೆ 300 ಜನಗಳಾದರೂ ಬೇಕು. ರಥ ಎಳೆಯುವವರ ಸಂಖ್ಯೆ ಕಡಿಮೆಯಿದ್ದರೂ ರಥ ಚಲಿಸಿತು. ಇದು ದೇವರ ಪವಾಡವೇ ಸರಿ’’ ಎಂದು ಅವರು ಹೇಳಿದ್ದಾರೆ.
ಬಾಲ್ಯದಿಂದಲೂ ಅವರು ಅಖಾಡ (ದೈಹಿಕ ಸಾಮರ್ಥ್ಯದ ಅಭ್ಯಾಸದ ಸ್ಥಳ) ದಲ್ಲಿ ಭಾಗವಹಿಸುತ್ತಿದ್ದಾರೆ. ಅನಿಲ್ ಅವರು ಹೇಳುವ ಪ್ರಕಾರ, ‘’2010ರಲ್ಲಿ ನಾನು ಜಿಮ್ ಗೆ ಸೇರಿಕೊಂಡೆ. ಬಾಡಿಬಿಲ್ಡರ್ ಆಗಿರುವ ನನ್ನ ಹಿರಿಯ ಸಹೋದರ ಸುನಿಲ್ ಅವರಿಂದ ಸ್ಫೂರ್ತಿ ಪಡೆದ ನಂತರ ವ್ಯಾಯಾಮ ಮಾಡಲು ಆರಂಭಿಸಿದೆ. ಅಂದಿನಿಂದ ಪ್ರತಿದಿನ ಮಧ್ಯಾಹ್ನ ನಿರಂತರವಾಗಿ ದೈಹಿಕ ವ್ಯಾಯಾಮ ಮಾಡುತ್ತಿದ್ದೇನೆ’’ ಎಂದು ತಿಳಿಸಿದ್ದಾರೆ.
ಈಗಾಗಲೇ ಅನಿಲ್ ಗೋಚಿಕರ್ ದೇಹರ್ದಾಡ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಫೋಟೋ ಪ್ರಕಟವಾದ ಬಳಿಕ ಅವರು ಮತ್ತಷ್ಟು ಜನಪ್ರಿಯತೆಗೆ ಗಳಿಸಿದ್ದಾರೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಹಾಗೂ ಪದಕಗಳನ್ನು ಗೆದ್ದಿದ್ದಾರೆ. ಒಡಿಶಾ ಪ್ರಶಸ್ತಿಯನ್ನು 7 ಬಾರಿ, ಪೂರ್ವ ಭಾರತ ಚಾಂಪಿಯನ್ ಪ್ರಶಸ್ತಿಯನ್ನು 3 ಬಾರಿ, ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು 4 ಬಾರಿ ಗೆದ್ದಿದ್ದಾರೆ. ಅಲ್ಲದೆ 2016ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಡಿಬಿಲ್ಡರ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಹಾಗೂ 2014ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದಾರೆ.