alex Certify ಈ ಕೆಟ್ಟ ಅಭ್ಯಾಸದಿಂದ್ಲೇ ಹೆಚ್ಚಾಗುತ್ತೆ ಬೊಜ್ಜು; ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಟ್ಟ ಅಭ್ಯಾಸದಿಂದ್ಲೇ ಹೆಚ್ಚಾಗುತ್ತೆ ಬೊಜ್ಜು; ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ಸ್ಥೂಲಕಾಯ ಬಹುದೊಡ್ಡ ಸಮಸ್ಯೆ. ಬಹುತೇಕರು ಇದರಿಂದ್ಲೇ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸ್ತಿದ್ದಾರೆ. ಅದರಲ್ಲೂ ಹೊಟ್ಟೆಯ ಬೊಜ್ಜು ಬೇಸರ ಮೂಡಿಸಿಬಿಡುತ್ತದೆ. ಎಷ್ಟು ಕಸರತ್ತು ಮಾಡಿದ್ರೂ ಹೊಟ್ಟೆ ಕರಗುವುದೇ ಇಲ್ಲ.

ಹಾಗಾಗಿ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕೆ ಕಾರಣ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಆ ತಪ್ಪುಗಳನ್ನು ಅರ್ಥಮಾಡಿಕೊಂಡು ಸರಿಪಡಿಸಿಕೊಂಡರೆ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು, ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ಸಮತೋಲಿತ ಆಹಾರ ಮತ್ತು ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು. ಸಂಶೋಧನೆಯೊಂದರ ಪ್ರಕಾರ, ಬೊಜ್ಜು ಬರಲು ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆ ಮಾತ್ರ ಕಾರಣವಲ್ಲ, ನಿದ್ರೆಯ ಕೊರತೆಯೂ ಬಹುದೊಡ್ಡ ಕಾರಣವಾಗಿದೆ. ನೀವು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿದ್ದರೆ, ನಿಮ್ಮ ಬೊಜ್ಜು ಹೆಚ್ಚಾಗಬಹುದು.

ನಿದ್ರಾಹೀನತೆಯಿಂದ್ಲೇ ಹೊಟ್ಟೆ ಬೆಳೆಯಲಾರಂಭಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಬಹಳ ಮುಖ್ಯ. ಹಾಗಂತ ದಿನದ ಯಾವುದೇ ಸಮಯದಲ್ಲಿ ನಿದ್ರೆ ಮಾಡುವುದು ಸರಿ ಎಂದು ಇದರ ಅರ್ಥವಲ್ಲ. ರಾತ್ರಿ ತಡವಾಗಿ ಮಲಗುವ ಅಭ್ಯಾಸವಿರುವವರು ಅಥವಾ ಕಡಿಮೆ ನಿದ್ರೆ ಮಾಡುವವರು ಸ್ಥೂಲಕಾಯತೆಯ ಅಪಾಯವನ್ನು ಹೊಂದಿರುತ್ತಾರೆ.

ರಾತ್ರಿ 10 ಗಂಟೆಗೆ ಮಲಗಿದರೆ ಬೊಜ್ಜು ಬರುವ ಸಾಧ್ಯತೆ ಕಡಿಮೆ. ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ ಬೊಜ್ಜು ಹೆಚ್ಚಾಗದಂತೆ ನಿಯಂತ್ರಿಸಬಹುದು. ಹಾಗಾಗಿ ಈ ತಪ್ಪನ್ನು ಮೊದಲು ಸರಿಪಡಿಸಿಕೊಳ್ಳಿ, ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...