ನೀವು ಮಾಡಿದ ಒಳ್ಳೆಯ ಕೆಲಸವನ್ನು ಯಾರಾದರೂ ಗುರುತಿಸಿದಾಗ ಅಥವಾ ಪ್ರಶಂಸಿಸಿದಾಗ ಅದಕ್ಕಿಂತ ಅತ್ಯುತ್ತಮ ಭಾವನೆ ಬೇರೆ ಇಲ್ಲ ಅಲ್ಲವೇ? ಜೋಸೆಫ್ ಫಾಸಾನೊ ಎಂಬ ಅಮೇರಿಕನ್ ಲೇಖಕನೊಂದಿಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಅದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಇವರು ಬರೆದ ಪುಸ್ತಕವನ್ನೇ ಓದುತ್ತಿದ್ದ ಮಹಿಳೆಯ ಪಕ್ಕದಲ್ಲಿ ತಾವು ಆಕಸ್ಮಿಕವಾಗಿ ಕುಳಿತುಕೊಂಡಿದ್ದ ಬಗ್ಗೆ ಆದ ಅನುಭವವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಜೋಸೆಫ್ ಫಾಸಾನೊ ಅವರು ಬರೆದ “ದಿ ಸ್ವಾಲೋಸ್ ಆಫ್ ಲುನೆಟ್ಟೊ” ಪುಸ್ತಕವನ್ನು ವಿಮಾನದಲ್ಲಿ ಮಹಿಳೆಯೊಬ್ಬರು ಓದುತ್ತಿದ್ದರು. ಅಚ್ಚರಿಯ ಸಂಗತಿ ಎಂದರೆ ತಾವು ಆ ಮಹಿಳೆಯ ಪಕ್ಕದಲ್ಲಿ ಕುಳಿತುಕೊಂಡಿದ್ದು. ಆಕೆ ಅದನ್ನು ಅಷ್ಟು ಮಗ್ನವಾಗಿ ಓದುತ್ತಿದ್ದುದನ್ನು ನೋಡಿ ತುಂಬಾ ಖುಷಿಯಾಯಿತು ಎಂದು ಹಂಚಿಕೊಂಡಿದ್ದಾರೆ.
ಈ ಕಾದಂಬರಿ ಬರೆದಿರುವುದು ತಾವೇ ಎಂದು ಹೇಳಲಿಲ್ಲ. ಬದಲಿಗೆ ಈ ಕಾದಂಬರಿಯ ಅನಿಸಿಕೆಯನ್ನು ಮಹಿಳೆಯಲ್ಲಿ ಕೇಳಿದಾಗ ಆಕೆ ತುಂಬಾ ಹೊಗಳಿದರು. ಅಸಲಿಗೆ ಅವರಿಗೆ ಲೇಖಕ ನಾನೇ ಎಂದು ತಿಳಿದಿರಲಿಲ್ಲ. ಇದೊಂದು ರೀತಿಯಲ್ಲಿ ವರ್ಣಿಸಲಾಗದ ಅನುಭೂತಿ ಎಂದಿದ್ದಾರೆ. ಇದಕ್ಕೆ ಹಲವಾರು ರೀತಿಯ ಕಮೆಂಟ್ ಬರುತ್ತಿದ್ದು, ಇದಕ್ಕಿಂತ ಜೀವನದಲ್ಲಿ ಬೇರೊಂದು ಖುಷಿ ಎಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.