ತೂಕ ವಿಪರೀತ ಹೆಚ್ಚಾಗುವುದು ಎಲ್ಲರಿಗೂ ತೊಂದರೆ ತರುವಂತಹ ಸಮಸ್ಯೆ. ಇದರಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಕಡೆಗೆ ಹೆಚ್ಹೆಚ್ಚು ಗಮನ ಕೊಡಲಾರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ನಾನಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಇಲ್ಲೊಬ್ಬಳು ಮಹಿಳೆ ಕೇವಲ 9 ತಿಂಗಳಲ್ಲಿ ತನ್ನ ತೂಕವನ್ನು ಸುಮಾರು 60 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದಾಳೆ. ಆಕೆ ಬೇರೆ ಯಾರೂ ಅಲ್ಲ ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ಅಮೇಯಾ ಭಾಗವತ್. ಆಕೆಯ ವೇಯ್ಟ್ ಲಾಸ್ ಜರ್ನಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
9 ತಿಂಗಳಲ್ಲಿ 60 ಕೆಜಿ ತೂಕ ಇಳಿಕೆ!
ಅಮೇಯಾ ಭಾಗವತ್ ಈ ತೂಕ ಮೊದಲು 131 ಕೆಜಿ ತೂಕವಿದ್ದರು. ಹೇಗಾದರೂ ಮಾಡಿ ತೂಕ ಇಳಿಸಲೇಬೇಕೆಂದು ಹಠ ತೊಟ್ಟ ಆಕೆ 9 ತಿಂಗಳ ಕಠಿಣ ಪರಿಶ್ರಮದಲ್ಲಿ 60 ಕೆಜಿ ಕಡಿಮೆ ಮಾಡಿಕೊಂಡಿದ್ದಾರೆ. ಈಗ ಅಮೇಯಾ 71 ಕೆಜಿ ತೂಕವಿದ್ದಾರೆ.
ತೂಕ ಕಡಿಮೆ ಮಾಡಿಕೊಳ್ಳಲು ಆಕೆ ಮೊದಲು ಅವರು ತಮ್ಮ ಆಹಾರ ಮತ್ತು ದಿನಚರಿಯನ್ನು ಬದಲಾಯಿಸಿದರು. ಎಲ್ಲಾ ರೀತಿಯ ಕಾರ್ಬೋಹೈಡ್ರೇಟ್‌ಗಳು, ಹಣ್ಣು, ನಟ್ಸ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಸುಮಾರು 45 ಕೆ.ಜಿ ತೂಕ ಇಳಿಸಿಕೊಂಡಾಗ ತಾನು ತಪ್ಪು ಮಾಡುತ್ತಿದ್ದೇನೆ ಎಂದು ಆಕೆಗೆ ಅನಿಸಿದೆಯಂತೆ.
ಸರಿಯಾಗಿ ಡಯಟ್ ಅನುಸರಿಸದ ಕಾರಣ ದೇಹವು ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿತ್ತು. ನಂತರ ಆಕೆ ತಮ್ಮ ಆಹಾರ ಮತ್ತು ವ್ಯಾಯಾಮವನ್ನು ಸಮತೋಲನಗೊಳಿಸಿದರು. ಸರಿಯಾದ ತರಬೇತಿಯೊಂದಿಗೆ ತೂಕ ಇಳಿಸಿದ್ದಾರೆ.
ತೂಕ ಇಳಿಸಿಕೊಳ್ಳಲು ಹಣ್ಣು ಮತ್ತು ತರಕಾರಿಗಳ ಹೊರತಾಗಿ ಮೊಟ್ಟೆ, ಚಿಕನ್, ಸೋಯಾ ಚಂಕ್ಸ್, ಚೀಸ್, ಪನೀರ್‌ನಂತಹ ಆಹಾರವನ್ನು ಅಮೇಯಾ ಸೇವನೆ ಮಾಡುತ್ತಾರೆ. ಅವರು ತಮ್ಮ ಆಹಾರದಲ್ಲಿ ಸಾಕಷ್ಟು ಕಾರ್ಬ್ಸ್ ಮತ್ತು ಸಮತೋಲಿತ ಪ್ರಮಾಣದ ಕೊಬ್ಬನ್ನು ಸೇರಿಸಿದ್ದಾರೆ. ಇದಕ್ಕಾಗಿ ಚಪಾತಿ, ಬಖಾರಿ, ಅನ್ನ, ಓಟ್ಸ್, ಬೀನ್ಸ್, ನಟ್ಸ್, ಮೊಟ್ಟೆಯ ಹಳದಿ ಲೋಳೆ, ತುಪ್ಪ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ.
ಈ ಅವಧಿಯಲ್ಲಿ ಅಮೇಯಾ ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪದಂತಹ ಯಾವುದನ್ನೂ ಸೇವಿಸಲಿಲ್ಲ. ಆದಾಗ್ಯೂ ದಿನಕ್ಕೆ 25 ರಿಂದ 30 ಗ್ರಾಂ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪವನ್ನು ಸೇವಿಸಬಹುದು. ಪ್ಯಾಕ್ ಮಾಡಿದ ಮತ್ತು ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಇವೆಲ್ಲದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಾಕಷ್ಟು ನಿದ್ದೆ ಮತ್ತು ದೇಹಕ್ಕೆ ಸರಿಯಾದ ವಿಶ್ರಾಂತಿ ಅವಶ್ಯಕ. ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಸಮತೋಲಿತ ಆಹಾರದ ಮೇಲೆ ಕೇಂದ್ರೀಕರಿಸಿ. ದೈನಂದಿನ ವ್ಯಾಯಾಮ ಕಡ್ಡಾಯ, ಜಂಕ್ ಫುಡ್ ನಿಂದ ದೂರವಿರಿ.