
ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಏನೇನೆಲ್ಲಾ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ವಿಷಯದಲ್ಲಿ ಅಂಥ ಸ್ವಾರಸ್ಯ ಏನೂ ಇಲ್ಲದೇ ಇದ್ದೂ ಸಣ್ಣದೊಂದು ಕ್ರಿಯೇಟಿವ್ ಪೋಸ್ಟ್ ಭಾರೀ ಲೈಕ್ಸ್ ಗಿಟ್ಟಿಸಿಕೊಂಡುಬಿಡುತ್ತದೆ.
ನೇರ ಪ್ರಸಾರದ ವೇಳೆಯೇ ಎಡವಟ್ಟು ಮಾಡಿಕೊಂಡ ವರದಿಗಾರ್ತಿ
ಟ್ವಿಟರ್‌ನಲ್ಲಿ ಮಾಡಿದ ಮದುವೆಯ ಘೋಷಣೆಯೊಂದು ಟಿಕ್ ಟಾಕ್ ಟೋ ಗೇಮ್ ಆಗಿ ತಿರುಗಿದೆ. ಮಹಿಳೆಯೊಬ್ಬರು ಮೆಹಂದಿ ಹಾಕಿರುವ ತಮ್ಮ ಕೈಗಳ ಚಿತ್ರವೊಂದನ್ನು ಪೋಸ್ಟ್ ಮಾಡಿ ತಾನು ಎಂಗೇಜ್ಮೆಂಟ್ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು.
ಕೋವಿಡ್ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
ಆಕೆಯ ಮೆಹಂದಿ ಡಿಸೈನ್ ಭಾರೀ ಚೆನ್ನಾಗಿದ್ದು, ಈ ಘೋಷಣೆ ಮತ್ತೊಂದು ಕಾರಣಕ್ಕೂ ನೆಟ್ಟಿಗರ ಗಮನ ಸೆಳೆದಿದೆ. ಆಕೆಯ ಕೈ ಮೇಲೆ ಇರುವ ಚೌಕಾಕೃತಿಯ ವಿನ್ಯಾಸವನ್ನು ನೆಟ್ಟಿಗರು ಟಿಕ್ ಟಾಕ್ ಟೋ ಆಡಲು ಬಳಸಿದ್ದಾರೆ. ಆಟದ ಫಲಿತಾಂಶಗಳನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

