
ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಹುಣಸೆಹಣ್ಣನ್ನು ಏಕೆ ತಿನ್ನಬೇಕು ಎಂದು ತಿಳಿಯೋಣ.
ಹೃದಯದ ಆರೋಗ್ಯ ಸುಧಾರಿಸುತ್ತದೆ – ಹುಣಸೆಹಣ್ಣನ್ನು ಮಿತವಾಗಿ ಸೇವಿಸಿದರೆ ಅದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಹುಣಸೆಹಣ್ಣು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದೆ. ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಕಾರಿ. ಇದು ಫ್ಲೇವನಾಯ್ಡ್‌ಗಳಂತಹ ಪಾಲಿಫಿನಾಲ್‌ಗಳನ್ನು ಸಹ ಒಳಗೊಂಡಿದೆ. ಹಾಗಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಕರುಳಿನ ಆರೋಗ್ಯ ಸುಧಾರಿಸುತ್ತದೆ – ಹುಣಸೆಹಣ್ಣು ಟಾನಿಕ್, ಕಾರ್ಮಿನೇಟಿವ್, ಆಂಟಿಸೆಪ್ಟಿಕ್, ಕ್ಲೀನಿಂಗ್ ಏಜೆಂಟ್ ಮತ್ತು ಫೆಬ್ರಿಫ್ಯೂಜ್ ಆಗಿ ಕೆಲಸ ಮಾಡುತ್ತದೆ. ಇದು ಕರುಳು ಮತ್ತು ಜೀರ್ಣಕ್ರಿಯೆಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಬಲ್ಲದು. ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ – ಹುಣಸೆಹಣ್ಣು ನಮ್ಮ ರೋಗನಿರೋಧಕ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಅನೇಕ ಗುಣಗಳನ್ನು ಹೊಂದಿದೆ. ಇದರಲ್ಲಿರುವ ವಿಟಮಿನ್ ಸಿ, ಎಂಟಿಒಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು, ಕ್ಯಾರೋಟಿನ್ ಮತ್ತು ಇತರ ಪೋಷಕಾಂಶಗಳು ನಮ್ಮ ರೋಗನಿರೋಧಕ ಶಕ್ತಿಗೆ ಉತ್ತಮ. ಇದು ಬದಲಾಗುತ್ತಿರುವ ಋತುವಿನಲ್ಲಿ ಶೀತ, ಕೆಮ್ಮು, ಜ್ವರದ ಅಪಾಯವನ್ನು ಕಡಿಮೆ ಮಾಡುತ್ತದೆ.
ಶಿಲೀಂಧ್ರ ವಿರೋಧಿ – ಹುಣಸೆಹಣ್ಣು ಟ್ಯಾಮರಿಂಡಿನಲ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಶಿಲೀಂಧ್ರನಾಶಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಅನೇಕ ಆರೋಗ್ಯ ತಜ್ಞರು ಇದನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ.